ಬಿಜೆಪಿಗೆ ಮತ ನೀಡಬೇಡಿ; ವಿವಾದ ಸೃಷ್ಟಿಸಿದ ಪಿಡಿಪಿ ನಾಯಕ

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಮತ ನೀಡಬೇಡಿ. ಅವರಿಗೆ ಮತ ನೀಡಿದರೆ ಹಿಂದೂ ಮುಖ್ಯಮಂತ್ರಿಯನ್ನೇ...
ಜಮ್ಮು ಕಾಶ್ಮೀರ
ಜಮ್ಮು ಕಾಶ್ಮೀರ
Updated on: 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಮತ ನೀಡಬೇಡಿ. ಅವರಿಗೆ ಮತ ನೀಡಿದರೆ ಹಿಂದೂ ಮುಖ್ಯಮಂತ್ರಿಯನ್ನೇ ಅವರು ಅಧಿಕಾರದಲ್ಲಿ ಕೂರಿಸ್ತಾರೆ ಎಂದು ಪಿಡಿಪಿ ಶಾಸಕ ಪೀರ್ ಮನ್ಸೂರ್ ಹೇಳಿದ್ದಾರೆ.

 ದಕ್ಷಿಣ ಕಾಶ್ಮೀರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಡಿಪಿ ಶಾಸಕ ಮನ್ಸೂರ್ ಕೆಲವೊಂದು ಪಕ್ಷಗಳು ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಲು ಮುಂದಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಹಿಂದೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಹುನ್ನಾರ ಮಾಡುತ್ತಿವೆ ಎಂದಿದ್ದಾರೆ.

ನೀವ್ಯಾರೂ ಬಿಜೆಪಿಗೆ ಮತ ನೀಡಬೇಡಿ. ಹಾಗೆ ಮಾಡಿದರೆ ಅವರು ಜಮ್ಮುವಿನಲ್ಲಿ ಹಿಂದೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಇದು ಕಾಶ್ಮೀರಕ್ಕೆ ಶಾಪವಾಗಿ ಪರಿಣಮಿಸಲಿದೆ.

ಕಾಶ್ಮೀರದಲ್ಲಿ ಮುಸ್ಲಿಂರ ಸಂಖ್ಯೆ ಜಾಸ್ತಿ ಇದೆ. ಆದ್ದರಿಂದ ನಮ್ಮ ಸಮುದಾಯಕ್ಕೆ ಸೇರಿದವರೇ ಮುಖ್ಯಮಂತ್ರಿ ಆಗಬೇಕು ಎಂದು ಮನ್ಸೂರ್ ಹೇಳಿದ್ದಾರೆ.

ಮನ್ಸೂರ್ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದೆ.

ಜಮ್ಮು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 25ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com