ವಿಶ್ವದ 'ಉತ್ತಮ ಅತಿಥೇಯ ನಗರ'ದ ಪಟ್ಟಿಯಲ್ಲಿ ಭಾರತದ ಮೂರು ನಗರಗಳಿಗೆ ಸ್ಥಾನ

ಜಗತ್ತಿನ ಉತ್ತಮ ಅತಿಥೇಯ ನಗರ ಅಂದರೆ, ನಮ್ಮ ದುಡ್ಡಿಗೆ ಮೋಸ ಮಾಡದೆ ಉತ್ತಮ ಅತಿಥೇಯ ಸೌಕರ್ಯಗಳನ್ನೊದಗಿಸುವ ...
ಅಮೃತ್‌ಸರ
ಅಮೃತ್‌ಸರ
Updated on: 

ನವದೆಹಲಿ: ಜಗತ್ತಿನ ಉತ್ತಮ ಅತಿಥೇಯ ನಗರ ಅಂದರೆ, ನಮ್ಮ ದುಡ್ಡಿಗೆ ಮೋಸ ಮಾಡದೆ ಉತ್ತಮ ಅತಿಥೇಯ ಸೌಕರ್ಯಗಳನ್ನೊದಗಿಸುವ ಹೋಟೆಲ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಗಿಟ್ಟಿಸಿಕೊಂಡಿವೆ.

ಉತ್ತಮ ಸೌಲಭ್ಯ ಕಲ್ಪಿಸುವ 100 ಹೋಟೆಲ್‌ಗಳ ಪಟ್ಟಿಯಲ್ಲಿ ಅಮೃತಸರ್, ಜೈಸಲ್ಮೇರ್ ಮತ್ತು ತಿರುವನಂತಪುರದ ಹೋಟೆಲ್‌ಗಳು ಸ್ಥಾನ ಗಳಿಸಿಕೊಂಡಿವೆ.

ಭಾರತದಿಂದ ಪೆರುವರೆಗೆ ಮತ್ತು ಅಮೆರಿಕದಿಂದ ಆಸ್ಟ್ರೇಲಿಯಾ ವರೆಗಿನ ನಗರಗಳಲ್ಲಿನ ಹೋಟೆಲ್ ಆತಿಥ್ಯದ ಬಗ್ಗೆ ಸಮೀಕ್ಷೆ ನಡೆಸಿ ಟ್ರಿವಾಗೊ ವೆಬ್ಸೈಟ್ ,  ಬೆಸ್ಟ್ ವ್ಯಾಲ್ಯೂ ಸಿಟಿ ಇಂಡೆಕ್ಸ್ 2015 ಪಟ್ಟಿ ತಯಾರಿಸಿದೆ.

ಈ ಪಟ್ಟಿಯನ್ನು ಗಮನಿಸಿದರೆ ಪುಟ್ಟ ಪುಟ್ಟ ನಗರಗಳು ಪ್ರವಾಸಿಗಳಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸುವ ಮೂಲಕ ಬೆಸ್ಟ್ ವ್ಯಾಲ್ಯೂ ಸಿಟಿ ಇಂಡೆಕ್ಸ್ 2015 ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಟ್ರಿವಾಗೋದ ಅಭಿನವ್ ಕುಮಾರ್ ಹೇಳಿದ್ದಾರೆ.

ಈ ಪಟ್ಟಿಯಲ್ಲಿ ಪಂಜಾಬ್‌ನ ಪುಣ್ಯಕ್ಷೇತ್ರ ಅಮೃತ್‌ಸರ 96.52 ಶೇ. ಅಂಕಗಳನ್ನು ಗಳಿಸಿ 6 ನೇ ಸ್ಥಾನಗಳಿಸಿದರೆ, ರಾಜಸ್ಥಾನದ ಜೈಸಲ್ಮೇರ್96.37 ಶೇ. ಅಂಕಗಳಿಸಿ 12 ನೇ ಸ್ಥಾನದಲ್ಲಿದೆ. ಅದೇ ವೇಳೆ ಕೇರಳದ ರಾಜಧಾನಿ ತಿರುವನಂತಪುರಂ 96.19 ಶೇ. ಅಂಕಗಳನ್ನು ಗಳಿಸಿ 15 ಸ್ಥಾನದಲ್ಲಿದೆ.

ಈ ರಾಜ್ಯಗಳು ವಿದೇಶಿ ಮತ್ತು ದೇಶೀ ಪ್ರವಾಸಿಗಳಿಗೆ ಇಷ್ಟವಾದ ಸ್ಥಳಗಳಾಗಿವೆ ಎಂದು ಟ್ರಿವಾಗೋ ಹೇಳಿದೆ.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com