

ಜಮ್ಮು: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸುವುದಕ್ಕೆ ಚುನಾವಣಾ ಆಯೋಗ ತಡೆಯನ್ನೊಡ್ಡಿದೆ.
ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣಾ ಪ್ರಚಾರ ಭಾನುವಾರ ಸಂಜೆಯೇ ಮುಗಿದಿರುವುದರಿಂದ ಸೋಮವಾರ ಚುನಾವಣಾ ಪ್ರಣಾಳಿಕೆ ಹೊರಡಿಸುವಂತಿಲ್ಲ ಎಂದು ರಾಜ್ಯದ ಚುನಾವಣಾ ನಿರೀಕ್ಷರು ಪಿಡಿಪಿಗೆ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ.
ಶ್ರೀನಗರದಲ್ಲಿ ಸೋಮವಾರ ಬೆಳಗ್ಗೆ ನಾವು ಪಕ್ಷದ ಚುನಾವಣಾ ಪ್ರಣಾಳಿಕೆ ಪ್ರಕಟಿಸುವುದಾಗಿ ಪಿಡಿಪಿ ಭಾನುವಾರ ಘೋಷಿಸಿತ್ತು.
ಆದಾಗ್ಯೂ, ಮೊದಲ ಹಂತದ ಚುನಾವಣೆಯ ಮತದಾನ ಮಂಗಳವಾರ ಸಂಜೆ ಮುಕ್ತಾಯಗೊಳ್ಳಲಿರುವುದರಿಂದ ನವೆಂಬರ್ 26ರ ನಂತರ ಪ್ರಣಾಳಿಕೆ ಬಿಡುಗಡೆಗೊಳಿಸಬಹುದೆಂದು ಚುನಾವಣಾ ಆಯೋಗ ಹೇಳಿದೆ.