ಪ್ರಧಾನ ಸುದ್ದಿ

ಹಿಂದುತ್ವ ದೇಶದ ಗುರುತು: ಭಾಗ್ವತ್

ಹಿಂದುತ್ವ ದೇಶದ ಗುರುತು: ಭಾಗ್ವತ್
Published On :

ನಾಗ್ಪುರ: ದಸರಾ ಹಬ್ಬದ ಪ್ರಯುಕ್ತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಮಾಡಿದ ಭಾಷಣವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಿದ್ದು ವಿವಾದಕ್ಕೀಡಾಗಿದೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಭಾಗ್ವತ್ ಹಿಂದುತ್ವ ಎಂಬುದು ದೇಶದ ಗುರುತು ಮತ್ತು ಅದು ವೈವಿಧ್ಯತೆಯಲ್ಲಿ ಏಕತೆಯನ್ನು ಬೆಸೆಯುವ ಕೊಂಡಿ ಎಂದು ಹೇಳಿದ್ದಾರೆ.

ಆರೆಸ್ಸೆಸ್ಸ್‌ನ 89ನೇ ಸಂಸ್ಥಾಪನಾ ದಿನ ಹಾಗು ದಸರಾ ಹಬ್ಬ ಒಂದೇ ದಿನ ನಡೆಯುತ್ತಿದ್ದು, ಈ ಆಚರಣೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗ್ವತ್ ಮೋದಿಯವರು ನಾಲ್ಕು ತಿಂಗಳಲ್ಲಿಯೇ ದೇಶದ  ಸುರಕ್ಷೆ, ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಉತ್ತಮ ನಡೆ ಸ್ವೀಕರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಭಾಗ್ವತ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡಿಸುತ್ತಿದೆ ಎಂದು ದೂರಿದೆ.

ಅದೇ ವೇಳೆ ಭಾಗ್ವತ್ ಅವರಿಗೆ ಬೆಂಬಲ ಸೂಚಿಸಿದ ಪ್ರಧಾನಿ ಮೋದಿ, ಭಾಗ್ವತ್ ಅವರು ಹೇಳಿದ ಮಾತುಗಳು ಪ್ರಸ್ತುತ ದೇಶದ ಪರಿಸ್ಥಿತಿಗೆ ಸಂಗತವಾದುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.