ಜಯಾಗೆ ಹಬ್ಬದೂಟ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಬ್ಬದೂಟ ಸೇವಿಸಿದ್ದಾರೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಕೈದಿಗಳಿಗೆ ಜೈಲಿನಲ್ಲಿ ಕೇಸರಿ ಬಾತ್, ಬಿಸಿಬೇಳೆಬಾತ್ ಹಾಗೂ ಮೊಸರನ್ನ ನೀಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಜಯಲಲಿತಾ ಅವರು ಬಿಸಿಬೇಳೆ ಬಾತ್ ಹಾಗೂ ಮೊಸರನ್ನ ಮಾತ್ರ ಸೇವಿಸಿದ್ದಾರೆಂದು ತಿಳಿದು ಬಂದಿದೆ.
ಶುಕ್ರವಾರ ಜೈಲಿನಲ್ಲಿ ಪ್ರತಿವರ್ಷದಂತೆ ಆಯುಧ ಪೂಜೆ ಮಾಡಲಾಗಿತ್ತು. ಜಯಲಲಿತಾ ಅವರು ಕೊಠಡಿ ಬಿಟ್ಟು ಹೊರಬಂದಿರಲಿಲ್ಲ. ಅಲ್ಲದೇ ಶನಿವಾರ ಕೂಡಾ ಹೊರ ಬಂದಿರಲಿಲ್ಲ. ಜಯಲಲಿತಾ ಜತೆ ಶಿಕ್ಷೆಗೆ ಒಳಗಾಗಿರುವ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಪೂಜೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಆಗಾಗ ಶಶಿಕಲಾ ಅವರೊಂದಿಗೆ ಮಾತ್ರ ಮಾತನಾಡುವ ಜಯಲಲಿತಾ ದಿನಪತ್ರಿಕೆ ಓದಿಕೊಂಡು ಕಾಲ ಕಳೆಯುತ್ತಿದ್ದಾರೆಂದು ತಿಳಿದುಬಂದಿದೆ.
ಎಂದಿನಂತೆ ಜಯಲಲಿತಾ ಅವರನ್ನು ಕಾಣಲು ಅನುಮತಿ ಕೋರಿ ತಮಿಳುನಾಡಿನಿಂದ ಪಕ್ಷದ ಸಚಿವರು , ಕಾರ್ಯಕರ್ತರು ಹಾಗು ಅಭಿಮಾನಿಗಳು ಬರುತ್ತಿದ್ದಾರೆ. ಆದರೆ, ತಮ್ಮ ಭೇಟಿಗೆ ಯಾರನ್ನೂ ಬಿಡದಂತೆ ಜಯಲಲಿತಾ ಅಧಿಕಾರಿಗಳಿಗೆ ತಿಳಿಸಿರುವುದರಿಂದ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಎಲ್ಲರೂ ಬೇಸರದಿಂದ ವಾಪಾಸಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


