ಆತಂಕವಾದದ ತೃಣಮೂಲ

ಬರ್ದ್ವಾನ್/ ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಮತ್ತೊಮ್ಮೆ ಆತಂಕವಾದದ ಕಳಂಕ ತಟ್ಟಿದೆ. ಬಾಂಗ್ಲಾ ಉಗ್ರರ ಜತೆಗಿನ ನಂಟಿನ ಆರೋಪ ಹೊತ್ತಿದ್ದ ಟಿಎಂಸಿ ಮುಖಂಡರಿಗೆ ಅಲ್ಖೈದಾ ಮತ್ತು ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರರ ಜತೆಗೂ ದೋಸ್ತಿ ಇರು ವ ಶಂಕೆ ವ್ಯಕ್ತವಾಗಿದೆ.
ಪಶ್ಚಿವ ಬಂಗಾಳದ ಬರ್ದ್ವಾನ್ನಲ್ಲಿ ಗುರುವಾರ, ಬಾಂಬ್ ಅಳವಡಿಸುತ್ತಿದ ವೇಳೆ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಶಂಕಿತ ಐಎಂ , ಅಲ್ಖೈದಾ ಉಗ್ರರು ಮೃತ ಪಟ್ಟರು. ಆಘಾತಕಾರಿ ವಿಚಾರವೆಂದರೆ ಈ ಉಗ್ರರು ವಾಸವಿದ್ದದ್ದು ಟಿಎಂಸಿ ಮುಖಂಡನ ಮನೆಯಲ್ಲಿ. ಇದೇ ಕಟ್ಟಡದಲ್ಲಿ ಪಕ್ಷದ ಕಚೇರಿಯೂ ಇದೆ. ಸ್ಫೋಟದ ಬಳಿಕ ಪೊಲೀಸರು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದು, ಕೇಂದ್ರದ ತನಿಖಾ ತಂಡಗಳ ತನಿಖೆಗೂ ಅಸಹಕಾರ ತೋರಿದ್ದು ನೋಡಿದರೆ ರಾಜ್ಯ ಸರ್ಕಾರ ಈ ಕೃತ್ಯವನ್ನು ಉದ್ದೇಶಪೂರ್ವಕ ಮುಚ್ಚಿಹಾಕಲು ಪ್ರಯತ್ನಿಸುವಂತಿದೆ. ಇದು ಟಿಎಂಸಿ ಮುಖಂಡರು, ಉಗ್ರರ ನಡುವೆ ನೇರ ನಂಟಿದೆ ಎನ್ನುವ ಗುಮಾನಿಯನ್ನು ಇನ್ನಷ್ಟುಬಲಪಡಿಸುತ್ತಿದೆ. ಈ ಹಿಂದೆ ಶಾರದಾ ಚಿಟ್ ಫಂಡ್ ಹಗರಣದಲ್ಲೂ ಟಿಎಂಸಿ ಹೆಸರು ಕೇಳಿಬಂದಿತ್ತು. ಚಿಟ್ಫಂಡ್ ಹಣ ಬಾಂಗ್ಲಾ ಉಗ್ರರಿಗೆ ರವಾನೆಯಾಗಿದ್ದನ್ನು ಸ್ವತಃ ಬಾಂಗ್ಲಾ ಸರ್ಕಾರವೇ ದಾಖಲೆ ಸಮೇತ ಭಾರತಕ್ಕೆ ತಿಳಿಸಿತ್ತು.
ದಾಖಲೆ ಸುಟ್ಟರು: ಬರ್ದ್ವಾನ್ ಸ್ಫೋಟದಲ್ಲಿ ಶಕೀಲ್ ಅಹ್ಮದ್ ಸ್ಥಳದಲ್ಲೇ ಮೃತ ಪಟ್ಟರೆ, ಶೋಭನ್ ಮೊಂಡಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಸನ್ ಸಾಹೇಬ್ ಎಂಬಾತನ ಸ್ಥಿತಿ ಗಂಭೀರವಾಗಿದೆ. ಶಕೀಲ್ ಪತ್ನಿ ರೂಮಿ ಬೀವಿ, ಹಸನ್ ಪತ್ನಿ ಅಮಿನಾ ಬೀವಿ ಹಾಗೂ ಮನೆ ಮಾಲೀಕ, ಟಿಎಂಸಿ ಮುಖಂಡ ನೂರುಲ್ ಹಸನ್ ಚೌಧರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ರೂಮಿ, ಅಮಿನಾ ಬಂದೂಕು ತೋರಿಸಿ ಇಡೀ ಮನೆಯನ್ನೇ ಸ್ಫೋಟಿಸುವ ಬೆದರಿಕೆ ಹಾಕಿದ್ದರು. ಇದರಿಂದ ಪೊಲೀಸರು ಮನೆಯೊಳಗೆ ಪ್ರವೇಶಿಸುವುದು ವಿಳಂಬವಾಯಿತು. ಈ ವೇಳೆ ಮಹಿಳೆಯರು ಮನೆಯಲ್ಲಿದ್ದ ದಾಖಲೆ ಪತ್ರಗಳು ಮತ್ತು ಸಾಕ್ಷ್ಯಗಳನ್ನು ಸುಟ್ಟು ಹಾಕಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹ
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಬಿಜೆಪಿ ಹಾಗೂ ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್ ಮತ್ತು ಉಗ್ರರ ಸಂಬಂಧದ ಕುರಿತುತನಿಖೆ ಆಗಬೇಕೆಂದು ಒತ್ತಾಯಿಸಿವೆ. ಘಟನೆಯಿಂದಾಗಿ ತೃಣಮೂಲ ಕಾಂಗ್ರೆಸ್ ಮತ್ತು ಉಗ್ರರ ಸಂಬಂಧದ ಕುರಿತು ತನಿಖೆ ಆಗಬೇಕೆಂದು ಒತ್ತಾಯಿಸಿವೆ. ಘಟನೆಯಿಂದಾಗಿ ತೃಣಮೂಲ ಕಾಂಗ್ರೆಸ್ ಮತ್ತು ಉಗ್ರರ ನಡುವೆ ಸಂಬಂಧ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಘಟನೆ ಕುರಿತು ತೀವ್ಕ ಕಳವಳ ವ್ಯಕ್ತ ಪಡಿಸಿರುವ ಬಿಜೆಪಿ, ಇದೊಂದು ಗಂಭೀರ ವಿಚಾರ ಘಟನೆ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದೆ.
ಮಮತಾ ಬ್ಯಾನರ್ಜಿ ಅವರ ಅಧಿಕಾರದಡಿ ಬಂಗಾಳವು ರಾಷ್ಟ್ರವಿರೋಧಿ ವ್ಯಕ್ತಿಗಳು ಮತ್ತು ಜಿಹಾದಿ ಚಟುವಟಿಕೆಗಳಿಗೆ ಸುರಕ್ಷಿತ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ. ಘಟನೆ ನಡೆದು ಒಂದು ದಿನದ ಬಳಿಕವಷ್ಟೇ ಯಾಕೆ ಎನ್ಐಎಗೆ ಮಾಹಿತಿ ನೀಡಲಾಯಿತು?
-ಸಿದ್ದಾರ್ಥನಾಥ್ ಸಿಂಗ್ , ಬಿಜೆಪಿ ಕಾರ್ಯದರ್ಶಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


