ಪ್ರಧಾನ ಸುದ್ದಿ

ಪತ್ನಿ ಮೇಲಿನ ಸೇಡಿಗಾಗಿ 2 ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಂದೆ

ಪತ್ನಿ ಮೇಲಿನ ಸೇಡಿಗಾಗಿ 2 ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಂದೆ
Published On :

ಹೈದರಾಬಾದ್: ವಿಚ್ಛೇದನದಿಂದ ನೊಂದ ಪತಿ, ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಏನೂ ಅರಿಯದ ತನ್ನ ಇಬ್ಬರು ಮುಗ್ಧ ಮಕ್ಕಳನ್ನು ಕೊಂದು, ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಎ.ಆರ್.ಗುರುಪ್ರಸಾದ್ ಎಂಬಾತ ಸಹಾಯಕ ಪ್ರಾಧ್ಯಾಪಕನಾಗಿದ್ದು, ಸಾಂಸಾರಿಕ ಜೀವನದಲ್ಲಿ ಕಲಹ ಉಂಟಾದ್ದರಿಂದ ಪತ್ನಿ ಸುಹಾಸಿನಿ 2013ರಲ್ಲಿ ವಿಚ್ಛೇದನ ನೀಡಿದ್ದರು. ಪತ್ನಿಯ ವಿಚ್ಛೇದನದಿಂದ ದೂರ ಉಳಿದಿದ್ದ ಗುರುಮೂರ್ತಿ ವಾರಾಂತ್ಯದಂದು ಮಕ್ಕಳನ್ನು ನೋಡಲೆಂದು ಸುಹಾಸಿನಿ ಮನೆಗೆ ಹೋಗಿ ಬರುತಿದ್ದ, ಈ ವೇಳೆ ತನ್ನ ಜೊತೆ ಮತ್ತೆ ಬಾಳುವಂತೆ ಸಾಕಷ್ಚು ಬಾರಿ ಸುಹಾಸಿನಿಯೊಂದಿಗೆ ವಿನಂತಿ ಇಟ್ಟಿದ್ದರು. ಆದರೆ ಈ ವಿನಂತಿಯನ್ನು ತಿರಸ್ಕರಿಸಿದ್ದ ಸುಹಾಸಿನಿ ಸಂಸಾರವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಇದರಿಂದ ಬೇಸತ್ತಿದ್ದ ಗುರುಮೂರ್ತಿ ಶನಿವಾರ ಬೆಳಿಗ್ಗೆ ಶಾಲೆಗೆ ಹೋಗಿದ್ದ ತನ್ನ ಇಬ್ಬರು ಮಕ್ಕಳು ವಿಟ್ಠಲ್ (9) ಮತ್ತು ನಂದ (5) ರನ್ನು ಕರೆದೊಯ್ದು ಹತ್ಯೆಗೈದು ತಾನು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ವೇಳೆ ಶಾಲೆಗೆ ಹೋದ ಮಕ್ಕಳು ಸಂಜೆಯಾದರೂ ಮನೆಗೆ ಹಿಂತಿರುಗಿ ಬರದಿದ್ದನ್ನು ಕಂಡ ಸುಹಾಸಿನಿ ಅನುಮಾನದಿಂದ ಗುರುಮೂರ್ತಿಗೆ ಕರೆ ಮಾಡಿದ್ದಾಳೆ. ಕರೆ ಸ್ವೀಕರಿಸಿದ ಪೋಲೀಸರು ಗುರುಮೂರ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಮಕ್ಕಳ ಬಗ್ಗೆ ವಿಚಾರಿಸಿದಾಗ ಪೋಲೀಸರಿಗೆ ಈ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಸುಹಾಸಿನಿಯನ್ನು ಘಟನಾ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದಾರೆ. ನಂತರ ಹಳಿಯ ಪಕ್ಕದಲ್ಲಿ ಬಿದ್ದಿದ್ದ ಗುರುಮೂರ್ತಿ ಮೊಬೈಲ್‌ನ್ನು ಪರಿಶೀಲಿಸಿದಾಗ ಮಕ್ಕಳನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರವಾನೆಯಾಗಿರದ ಒಂದು ಸಂದೇಶ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.