ಪ್ರಧಾನ ಸುದ್ದಿ

'ಸಂಸದ ಆದರ್ಶ ಗ್ರಾಮ' ಯೋಜನೆಗೆ ಮೋದಿ ಚಾಲನೆ

'ಸಂಸದ ಆದರ್ಶ ಗ್ರಾಮ' ಯೋಜನೆಗೆ ಮೋದಿ ಚಾಲನೆ
Published On :

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕನಸಿನ 'ಸಂಸದ ಆದರ್ಶ ಗ್ರಾಮ' ಯೋಜನೆಗೆ ಶನಿವಾರ ಚಾಲನೆ ನೀಡಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಗ್ರಾಮ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯಬೇಕು. ಪ್ರತಿ ಗ್ರಾಮವೂ ಸಮಾಜದಂತೆ ಬದಲಾಗಬೇಕು. ಈ ಬದಲಾವಣೆಗಾಗಿ ನಾವು ಹಲವು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಹಳ್ಳಿಗಳ ಸಮಗ್ರ ಅಭಿವೃದ್ಧಿಯೇ ಈ ಯೋಜನೆಯ ಮೂಲ ಉದ್ದೇಶವಾಗಿದ್ದು, ಸಂಸದರ ನೇತೃತ್ವದಲ್ಲಿ ಯೋಜನೆ ನಡೆಯಲಿದೆ. ಈ ಯೋಜನೆಯಲ್ಲಿ ಒಂದೇ ಒಂದು ಷರತ್ತು ವಿಧಿಸಲಾಗಿದೆ. ಅದು ಏನೆಂದರೆ ಸಂಸದರು ತಮ್ಮ ಸ್ವಗ್ರಾಮವನ್ನು ಹೊರತುಪಡಿಸಿ, ಬೇರೆ ಯಾವುದೇ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ನಿರ್ಮಿಸಬಹುದು. ಪ್ರತಿ ಸಂಸದರು ಮೂರು ಆದರ್ಶ ಗ್ರಾಮಗಳನ್ನು ನಿರ್ಮಿಸಬೇಕು ಮತ್ತು ಈ ಗ್ರಾಮಗಳ ಬಗ್ಗೆ ಜನರು ಹೆಮ್ಮೆ ಪಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಮೋದಿ ಕರೆ ನೀಡಿದರು.

ದೇಶದಲ್ಲಿ ಕಲವೇ ಗ್ರಾಮಗಳೂ ಅಭಿವೃದ್ಧಿಯಾಗಿವೆ. ನಮ್ಮ ದೇಶದಲ್ಲಿ 800 ಸಂಸದರಿದ್ದಾರೆ ಪ್ರತಿಯೊಬ್ಬರು ಮೂರು ಗ್ರಾಮ ಅಭಿವೃದ್ಧಿ ಮಾಡಿದರೆ ಸುಮಾರು 2500 ಗ್ರಾಮಗಳನ್ನು ಅಭಿವೃದ್ಧಿ ಮಾಡಬಹುದು. ಅದೇ ರೀತಿ ರಾಜ್ಯಗಳಲ್ಲಿ ಪ್ರತಿ ಶಾಸಕರು ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆದರ್ಶ ಗ್ರಾಮವನ್ನು ನಿರ್ಮಿಸಬೇಕು ಎಂದು ಪ್ರಧಾನಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.