ದುರ್ಬಲವಾದ ಹುಡ್ಹುಡ್, ದಾಳಿಯಿಂದ ಚೇತರಿಸಿದ ಆಂಧ್ರ

ವಿಶಾಖಪಟ್ಟಣಂ: ಆಂಧ್ರದತ್ತ ದಾಳಿಯಿಟ್ಟಿದ್ದ ಹುಡ್ ಹುಡ್ ಚಂಡಮಾರುತದ ತೀವ್ರತೆ ಈಗ ಕಡಿಮೆಯಾಗಿದ್ದು, ಆಂಧ್ರ ಪ್ರದೇಶವೀಗ ಚೇತರಿಸಿಕೊಳ್ಳುತ್ತಿದೆ.
ಭಾನುವಾರ ಹುಡ್ ಹುಡ್ ಚಂಡಮಾರುತ ಆಂಧ್ರ ಕರಾವಳಿಗೆ ಅಪ್ಪಳಿಸಿರುವುದರಿಂದ ಅಲ್ಲಿನ ಮೂರು ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆ ಮರಗಳು ಕುಸಿದು ಬಿದ್ದು ನಾಶ ನಷ್ಟಗಳು ಸಂಭವಿಸಿವೆ.
ಚಂಡಮಾರುತ ಇದೀಗ ದುರ್ಬಲವಾಗಿದ್ದರೂ ವಿಶಾಖ ಪಟ್ಟಣ, ಶ್ರೀಕಾಕುಲಂ, ವಿಜಿಯಾನಗರಂ ಮೊದಲಾದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಅದೇ ವೇಳೆ ಒಡಿಶಾದಲ್ಲಿ ಬೀಸಿದ ಹುಡ್ ಹುಡ್ ಚಂಡಮಾರುತದ ರೌದ್ರಾವತಾರಕ್ಕೆ 8 ಮಂದಿ ಸಾವನ್ನಪ್ಪಿದ್ದಾರೆ.
ಸದ್ಯ. ಹುಡ್ ಹುಡ್ ಚತ್ತೀಸ್ಗಢದತ್ತ ಲಗ್ಗೆಯಿಟ್ಟಿದೆ.
ಆಂಧ್ರ ಪ್ರದೇಶದಲ್ಲಿ 2.48 ಲಕ್ಷ ಜನರು ಹುಡ್ ಹುಡ್ ಸಂತ್ರಸ್ತರಿದ್ದಾರೆ. 1,35,262 ಜನರನ್ನು ಈಗಾಗಲೇ ಸಂತ್ರಸ್ತರ ಶಿಬಿರಕ್ಕೆ ಸಾಗಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


