ಪ್ರಧಾನ ಸುದ್ದಿ

ಜಯಾ ಮತ್ತೆ ಸಿಎಂ ಗಾದಿ ಏರುವಂತಿಲ್ಲ

ಜಯಾ ಮತ್ತೆ ಸಿಎಂ ಗಾದಿ ಏರುವಂತಿಲ್ಲ
Published On :

ನವದೆಹಲಿ: ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಆದೇಶದಿಂದಾಗಿ 21 ದಿನಗಳಿಂದ ಜೈಲಿನಲ್ಲಿರುವ ಜಯಲಲಿತಾ ಅವರಿಗೆ ಬಿಡುಗಡೆಯ ಭಾಗ್ಯ ದಕ್ಕಿದೆ. ಆದರೆ ನ್ಯಾಯಪೀಠವು ಬೆಂಗಳೂರು ವಿಶೇಷ ಕೋರ್ಟ್‌ನ ತೀರ್ಪನ್ನು ರದ್ದು ಮಾಡಿಲ್ಲ. ಕೇವಲ ಶಿಕ್ಷೆಯನ್ನು ಮಾತ್ರ ಅಮಾನತಿನಲ್ಲಿಟ್ಟಿರುವುದರಿಂದ ಜಯಲಲಿತಾ ಅವರು ಮುಖ್ಯಮಂತ್ರಿ ಗಾದಿ ಏರಲಾಗದು.

ಡಿಸೆಂಬರ್ 18ರೊಳಗೆ ಪ್ರಕರಣಕ್ಕೆ ಸಂಬಂಧಿಸಿದ 35, 000 ಪುಟಗಳಷ್ಟಿರುವ ದಾಖಲೆಗಳನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು. ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅನುಯಾಯಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ನಿರ್ಬಂಧ ಇಲ್ಲ
ಜಯಲಲಿತಾ ಅವರಿಗೆ ಷರತ್ತಿನ ಮೇಲೆ ಜಾಮೀನು ನೀಡಿದ್ದರೂ ಅವರಿಗೆ ಯಾವ ನಿರ್ಬಂಧವನ್ನೂ ನ್ಯಾಯಪೀಠ ಹೇರಿಲ್ಲ. ಒಂದು ಹಂತದಲ್ಲಿ ಜಯ ಲಲಿತಾ ಪರ ವಕೀಲ ಫಾಲಿ ನಾರಿಮನ್ ಅವರು, ಜಯಲಲಿತಾ ಅವರ ಆರೋಗ್ಯ ಕಾಪಾಡಿಕೊಳ್ಳಬೇಕು. ಎರಡು-ಮೂರು ತಿಂಗಳು ತಮ್ಮ ನಿವಾಸ ಬಿಟ್ಟು ಹೊರ ಹೋಗುವುದಿಲ್ಲ, ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ನಿವೇದಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ನಾವು ಜಾಮೀನು ನೀಡಬಹುದು, ಇಲ್ಲವೇ ನೀಡದಿರಬಹುದು. ಆದರೆ, ನಾವು ಆ ರೀತಿ ಅಸಹಜವಾದ ನಿರ್ಬಂಧ ಹೇರುವುದಿಲ್ಲ. ಭಾರತದ ನಾಗರಿಕರಾಗಿ ಅವರು ಸ್ವತಂತ್ರರು. ಆದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವ ನಡವಳಿಕೆಯನ್ನೂ ಸಹಿಸಲಾಗದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.