ಬಾರಾಮತಿ ಕ್ಷೇತ್ರದಲ್ಲಿ ಮರು ಚುನಾವಣೆಗೆ ಒತ್ತಾಯ

ಮುಂಬೈ: ಮಹಾರಾಷ್ಟ್ರದ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇದೀಗ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಗೆದ್ದಿದ್ದರು. ಆದರೆ ಇವರ ಗೆಲವಿನ ಬಗ್ಗೆ ಸಂಶಯವಿದೆ, ಆದ್ದರಿಂದ ಇಲ್ಲಿ ಮರು ಚುನಾವಣೆ ಮಾಡಬೇಕೆಂದು ಬಿಜೆಪಿ ಸೇರಿದಂತೆ ಕೆಲವು ಸ್ವತಂತ್ರ ಅಭ್ಯರ್ಥಿಗಳು ತಕರಾರು ಎತ್ತಿದ್ದಾರೆ.
54 ಇಲೆಕ್ಟ್ರಿಕ್ ವೋಟಿಂಗ್ ಮೆಷಿನ್ಗಳಲ್ಲಿ ಏನೋ ಎಡವಟ್ಟು ಮಾಡಲಾಗಿದೆ ಎಂಬುದು ಈ ಅಭ್ಯರ್ಥಿಗಳ ಆರೋಪವಾಗಿದೆ. ಕೆಲವೊಂದು ಬೂತ್ಗಳಲ್ಲಿ ಮತಗಳ ಸಂಖ್ಯೆ ಸೊನ್ನೆ ಎಂದು ತೋರಿಸಿದೆ. ಆದಾಗೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಮಗೆ ನಾವೇ ಮತ ಹಾಕಿರುವಾಗ, ಮತಗಳ ಸಂಖ್ಯೆ ಸೊನ್ನೆ ಆಗುವುದಾರೂ ಹೇಗೆ? ಎಂದು ಸ್ವತಂತ್ರ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ಆದರೆ ಈ ಆರೋಪನ್ನು ರಿಟರ್ನಿಂಗ್ ಆಫೀಸರ್ ತಳ್ಳಿ ಹಾಕಿದ್ದಾರೆ.
ಇದೀಗ ನಡೆದ ವಿಧಾನಸಭಾ ಚುನಾವಣೆಯವಲ್ಲಿ ಎನ್ಸಿಪಿ ಅಭ್ಯರ್ಥಿ ಅಜಿತ್ ಪವಾರ್, ಬಿಜೆಪಿ ಅಭ್ಯರ್ಥಿ ಭಾಳಾಸಾಹೇಬ್ ಗವಾಡೆ ಅವರನ್ನು 89,791 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆದಾಗ್ಯೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಸಂಬಂಧಿ ಸುಪ್ರಿಯಾ ಸುಲೆ ಅವರಿಗೆ ಮತ ನೀಡದಿದ್ದರೆ ಮಸಲ್ವಾಡಿ ಗ್ರಾಮದಲ್ಲಿ ನೀರು ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಅಜಿತ್ ಪವಾರ್ ಬೆದರಿಕೆಯನ್ನೊಡ್ಡಿದ್ದರು ಎಂದು ಆರೋಪಿಸಲಾಗಿದೆ. ಮಾತ್ರವಲ್ಲದೆ ಇಲೆಕ್ಟ್ರಿಕ್ ವೋಟಿಂಗ್ ಮೆಷಿನ್ನಲ್ಲಿ ಎಡವಟ್ಟು ಮಾಡಿದರಲ್ಲಿಯೂ ಸುಪ್ರಿಯಾ ಅವರ ಕೈವಾಡವಿದೆ ಎಂದು ದೂರಲಾಗಿದೆ.
ಭಾನುವಾರ 14ನೇ ಸುತ್ತಿನ ಮತ ಎಣಿಕೆ ಮಾಡುವಾಗ ವೋಟಿಂಗ್ ಮೆಷಿನ್ನಲ್ಲಿ ಕ್ರಮಸಂಖ್ಯೆ ಬದಲಾಗಿರುವುದು ಗಮನಕ್ಕೆ ಬಂದಿತ್ತು. ಆವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಿಭಟಿಸಿದ್ದು, ಪ್ರಸ್ತುತ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಆದರೆ ನಾವೇನು ತಪ್ಪು ಮಾಡಿಲ್ಲ, ಸುಖಾಸುಮ್ಮನೆ ವಿವಾದ ಸೃಷ್ಟಿಸಲಾಗುತ್ತಿದೆ, ವೋಟಿಂಗ್ ಮೆಷಿನ್ನ ಕ್ರಮ ಸಂಖ್ಯೆ ಬದಲಿರುವುದು ತಾಂತ್ರಿಕ ಸಮಸ್ಯೆ ಇದ್ದ ಕಾರಣ ಅಷ್ಟೇ, ಇದರಲ್ಲಿ ನಮ್ಮ ಕೈವಾಡವೇನೂ ಇಲ್ಲ. ನಮ್ಮ ಗೆಲವನ್ನು ಸಹಿಸಿಕೊಳ್ಳಲು ಸಾಧ್ಯವಾಗದವರು ಈ ರೀತಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಎನ್ಸಿಪಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


