ಪ್ರಧಾನ ಸುದ್ದಿ

ಮಣಿಪುರ ಉಪಚುನಾವಣೆ: ಕಾಂಗ್ರೆಸ್ ಗೆಲವು

ಮಣಿಪುರ ಉಪಚುನಾವಣೆ: ಕಾಂಗ್ರೆಸ್ ಗೆಲವು
(ಸಾಂದರ್ಭಿಕ ಚಿತ್ರ)
Published On :

ಇಂಪಾಲ್:  ಮಣಿಪುರದ ಹಿಯಾನ್‌ಗ್ಲಾನ್‌ಗಂ ವಿಧಾನಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಮಣಿಪುರದ ಮುಖ್ಯಮಂತ್ರಿ ಓಂಕಾರ್ ಇಬೋಬಿ ಸಿಂಗ್ ಅವರ ಊರೆಲ್ಲೇ ಈ ವಿಧಾನಸಭಾ ಕ್ಷೇತ್ರವಿದೆ. ಪ್ರಸ್ತುತ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳಿದ್ದು, 24,492  ಮತದಾರರರಿದ್ದಾರೆ.

ಅಕ್ಟೋಬರ್ 17ರಂದು ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಬಹಿರಂಗಗೊಂಡಿದ್ದು, ಕಾಂಗ್ರೆಸ್ ನ ದಿಜ್ವಾಮನಿ ಇಲಾಗ್‌ಬಾಮ್ ವಿಜಯದ ನಗೆ ಬೀರಿದ್ದಾರೆ.  ತೃಣಮೂಲ ಕಾಂಗ್ರೆಸ್‌ನ ರಾಧೇಶಾಮ್ ಯುಮ್‌ನಮ್ ಅವರನ್ನು ಪರಾಭವಗೊಳಿಸಿದ ಇಲಾಗ್‌ಬಾಮ್ ಒಟ್ಟು 9008 ಮತಗಳನ್ನು ಗಳಿಸಿದ್ದಾರೆ.

ಮಣಿಪುರದಲ್ಲಿ ಗೆಲವು ಸಾಧಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ನೇತಾರರು  ಮೋದಿ ಅಲೆ ಮಣಿಪುರಕ್ಕೆ ತಲುಪಿಲ್ಲ. 2012ರ ವಿಧಾನಸಭಾ ಚುನಾವಣೆ ಮತ್ತು ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಮೋದಿ ಅಲೆ ಮಣಿಪುರವನ್ನು ಬಾಧಿಸಿಲ್ಲ ಎಂದು ಹೇಳಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.