'ಹ್ಯಾಪಿ ನ್ಯೂ ಇಯರ್' ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗಾದ ಅವಮಾನ

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರದ ವೇಳೆ ಪತ್ರಕರ್ತರಿಗೆ ಒಂದಿಲೊಂದು ಅವಮಾನಗಳು ನಡೆಯುತ್ತಿವೆ.
ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಅನೇಕ ವಿಶೇಷ ಪತ್ರಿಕಾಗೋಷ್ಠಿಗಳು ದಿನನಿತ್ಯ ನಡೆಯುತ್ತಿವೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಶಾರುಕ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರಲ್ಲಿ ಯಾರು ಉತ್ತಮರು ಎಂದು ಕೇಳಿದಕ್ಕೆ ಚಿತ್ರತಂಡ ಆ ಪರ್ತಕರ್ತನನ್ನು ಟೇಬಲ್ ಮೇಲೆ ಹತ್ತಿಸಿ ಡ್ಯಾನ್ಸ್ ಮಾಡಿಸಿದ ಘಟನೆ ನಡೆದಿದೆ.
ಯಾವುದೇ ಸಿನಿಮಾ ಪ್ರಚಾರದ ಸುದ್ದಿಗೋಷ್ಠಿಗೂ ಮುನ್ನ ಚಿತ್ರದ ಬಗ್ಗೆ ಸಕರಾತ್ಮಕ ಪ್ರಶ್ನೆಗಳನ್ನು ಕೇಳಬೇಕು ಎಂದು ಪತ್ರಕರ್ತರನ್ನು ಕೇಳಿಕೊಳ್ಳುವುದು ಸಹಜ. ಆದರೆ ಈ ಸುದ್ದಿಗೋಷ್ಠಿಯಲ್ಲಿ ಮನವಿಯ ಜೊತೆಗೆ ಎಚ್ಚರಿಕೆಯನ್ನು ಸೇರಿಸಲಾಗಿತ್ತು. ಯಾರಾದರೂ ನಕರಾತ್ಮಕ ಪ್ರಶ್ನೆಯನ್ನು ಕೇಳಿದರೆ ಚೇರ್ನಲ್ಲಿ ಎಂದು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಬೇಕಾಗುತ್ತದೆ ಎಂಬ ಕರಾರನ್ನೂ ಚಿತ್ರತಂಡ ಹಾಕಿತ್ತು.
ಸುದ್ದಿಗೋಷ್ಠಿಗೆ ಶಾರುಕ್ ಖಾನ್ ಬಿಟ್ಟು ಇತರ ಕೆಲ ಸ್ಟಾರ್'ಗಳು ಆಗಮಿಸಿದ್ದರು. ದೀಪಿಕಾ ಪಡುಕೋಣೆ, ಫರಾ ಖಾನ್, ಸೋನು ಸೂದ್ ಮೊದಲಾದವರು ಬಂದಿದ್ದರು. ಸೋನು ಸೂದ್ ಸಲ್ಮಾನ್ ಖಾನ್ ಚಿತ್ರದಲ್ಲೂ ಅಭಿನಯಿಸಿದ್ದರಿಂದ ಪತ್ರಕರ್ತನೊಬ್ಬ "ತಾವು ಇಬ್ಬರ ಸಿನಿಮಾಗಳಲ್ಲೂ ಅಭಿನಯಿಸಿದ್ದೀರಿ. ನಿಮಗೆ ಯಾರು ಉತ್ತಮ ಎನಿಸುತ್ತದೆ" ಎಂದು ಕೇಳಿದ್ದಾರೆ. ಅದಕ್ಕೆ ಸೋನು ಸೂದ್'ಗೆ ಮುಜುಗರವಾಗಿ ಸುಮ್ಮನಾಗಿದ್ದಾರೆ. ಸೋನು ಇಂಥ ಸಿಲ್ಲಿ ಪ್ರಶ್ನೆಗೆಲ್ಲಾ ಉತ್ತರ ಕೊಡುವುದಿಲ್ಲ ಎಂದು ಫರಾ ಖಾನ್ ಹೇಳಿದ್ದಾರೆ. ಆಗ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ನಿರೂಪಕನೊಬ್ಬ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಕುರ್ಚಿಯ ಮೇಲೆ ನಿಲ್ಲಿಸಿ ಡ್ಯಾನ್ಸ್ ಮಾಡಿಸಿದ್ದಾನೆ.
ನಿಗದಿಯಾದ ಸಮಯಕ್ಕಿಂತ ಎರಡೂವರೆ ಗಂಟೆ ವಿಳಂಬವಾಗಿ ಸುದ್ದಿಗೋಷ್ಠಿ ನಡೆಸಿದ ಜೊತೆಗೆ ಪತ್ರಕರ್ತರನ್ನು ಹೀನಾಯವಾಗಿ ನಡೆಸಿಕೊಂಡ ಆಯೋಜಕರ ಉದ್ಧಟತನ ಮಾಧ್ಯಮ ಪ್ರತಿನಿಧಿಗಳಿಗೆ ಇರಿಸು ಮುರುಸು ಮಾಡಿದೆ.
(ಮಾಹಿತಿ: ಶೋಮಿನಿ ಸೇನ್, ಐಬಿಎನ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


