ಪ್ರಧಾನ ಸುದ್ದಿ

ಮಹಾರಾಷ್ಟ್ರದಲ್ಲಿ ದಲಿತ ಕುಟುಂಬದ ಮೂವರ ಬರ್ಬರ ಹತ್ಯೆ

ಮಹಾರಾಷ್ಟ್ರದಲ್ಲಿ ದಲಿತ ಕುಟುಂಬದ ಮೂವರ ಬರ್ಬರ ಹತ್ಯೆ
Published On :

ಅಹ್ಮದಾನಗರ(ಮಹಾರಾಷ್ಟ್ರ): ಖೈರ್ಲಾಂಜಿ ಕಗ್ಗೊಲೆಯನ್ನು ನೆನಪಿಸುವ, ಜಾಧವ ದಲಿತ ಕುಟುಂಬದ ಮೂವರು ಸದಸ್ಯರನ್ನು ಮಹಾರಾಷ್ಟ್ರದ ಅಹ್ಮದಾನಗರ ಜಿಲ್ಲೆಯ ಪತ್ರಾಡಿ ನಗರದಲ್ಲಿ ಮಂಗಳವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪೊಲೀಸರು ಈ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ಕೊಲೆಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ.

ಪತ್ರಾಡಿ ನಗರದ ಜಾವ್ಖಡೆ ಗ್ರಾಮದಲ್ಲಿ ನಡೆದ ಈ ದುಷ್ಕೃತ್ಯದಲ್ಲಿ, ಜಯಶ್ರೀ ಮತ್ತು ಸಂಜಯ್ ಜಾಧವ್ ದಂಪತಿ ಮತ್ತು ಮಗ ಸುನಿಲ್ ಇವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪಕ್ಕದ ಬಾವಿಗೆ ಎಸೆಯಲಾಗಿದೆ.

ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಮನೆಯ ತೆರೆದ ಬಾಗಿಲನ್ನು ಕಂಡು, ಹತ್ಯೆಗೊಂಡವರ ಬಂಧುಗಳಿಗೆ ತಿಳಿಸಿದ್ದಾರೆ.

ಆದರೆ ಮನೆಯಲ್ಲಿ ರಕ್ತವನ್ನಷ್ಟೆ ಕಂಡ  ಬಂಧುಗಳು, ಹತ್ತಿರದ ಆಸ್ಪತ್ರೆಗೆ ತೆರಳಿ ವಿಚಾರ ಮಾಡಿದ್ದರೂ ಏನೂ ತಿಳಿಯದೆ  ಮತ್ತೆ ಹುಡುಕಾಡಿದಾಗ ಮನೆಯ ಹತ್ತಿರದಲ್ಲಿದ್ದ ಬಾವಿಯಲ್ಲಿ  ತುಂಡು ತುಂಡಾಗಿ ಕತ್ತರಿಸಿದ್ದ ದೇಹಗಳನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.

ಹತ್ಯೆಯಾಗಿರುವ ಸಂಜಯ್ ಜಾಧವ್ ರೈತ, ಅವನಿಗೆ ಒಂದು ಎಕರೆ ಜಮೀನಿದೆ. ಅವನ ಮಗ ಸುನಿಲ್ ಮುಂಬೈ ನ ಒಂದು ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗು ಒಂದು ವಾರದ ಹಿಂದೆಯಷ್ಟೇ ತನ್ನ ಹಳ್ಳಿಗೆ ಬಂದಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.