ಪ್ರಧಾನ ಸುದ್ದಿ

ಪಟಾಕಿ ಅಂಗಡಿ ಬೆಂಕಿಗಾಹುತಿ; 7 ಮಂದಿ ಸಜೀವ ದಹನ

ಪಟಾಕಿ ಅಂಗಡಿ ಬೆಂಕಿಗಾಹುತಿ; 7 ಮಂದಿ ಸಜೀವ ದಹನ
(ಸಾಂದರ್ಭಿಕ ಚಿತ್ರ)
Published On :

ಜೈಪುರ: ಜೈಪುರದ ಬಾರ್ಮರ್ ಜಿಲ್ಲೆಯ ಬಲೋತರ ನಗರದಲ್ಲಿ ಪಟಾಕಿ ಅಂಗಡಿಯೊಂದು ಬೆಂಕಿಗಾಹುತಿಯಾಗಿದ್ದು, 7 ಮಂದಿ ಸಜೀವ ದಹನವಾದ ಘಟನೆ ವರದಿಯಾಗಿದೆ.

ಪಟಾಕಿ ಅಂಗಡಿ ಮತ್ತು ದಾಸ್ತಾನು ಮಳಿಗೆ ಇರುವ ಕಟ್ಟಡ ಗುರುವಾರ ಬೆಳಗ್ಗೆ ಬೆಂಕಿಗಾಹುತಿಯಾಗಿದೆ.

ದೀಪಾವಳಿ ಆಚರಣೆಯಲ್ಲಿ ಹಾರಿಸಿದ ಪಟಾಕಿ ಈ ಕಟ್ಟಡಕ್ಕೆ ಬಿದ್ದು,  ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಘಟನೆ ಸಂಭವಿಸುವಾಗ ಪಟಾಕಿ ಅಂಗಡಿ ಮುಚ್ಚಿತ್ತು.

ಬೆಂಕಿಗಾಹುತಿಯಾಗಿರುವ ಈ ಕಟ್ಟಡದಲ್ಲಿ ಬಟ್ಟೆ ಅಂಗಡಿ ಮತ್ತು ದಾಸ್ತಾನು ಮಳಿಗೆ ಇತ್ತು ಎಂದು ಬಾರ್ಮರ್ ಎಸ್ಪಿ ಹೇಮಂತ್ ಶರ್ಮಾ ಹೇಳಿದ್ದಾರೆ.

ಘಟನೆ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭಿಸಿಲ್ಲ. ದಾಸ್ತಾನು ಮಳಿಗೆಯಲ್ಲಿದ್ದ ಏಳು ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಇನ್ನು ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಸಾವಿಗೀಡಾದವರು 30 ರಿಂದ 50ರ ನಡುವಿನ ವಯಸ್ಸಿನವರಾಗಿದ್ದಾರೆ ಎಂದು  ಶರ್ಮಾ ಹೇಳಿದ್ದಾರೆ.

ಬಟ್ಟೆ ಅಂಗಡಿ ಬೆಂಕಿಗಾಹುತಿಯಾದಾಗ, ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರು ಪಟಾಕಿ ಇರಿಸಿದ್ದ ಕೊಠಡಿಯಲ್ಲೇ ಆಶ್ರಯವನ್ನು ಪಡೆದಿದ್ದಾರೆ. ತಕ್ಷಣವೇ ಬೆಂಕಿಯ ಕೆನ್ನಾಲೆ ಕಟ್ಟಡಕ್ಕೆ ಹಬ್ಬಿದ್ದು, ಒಂದರ ನಂತರ ಒಂದು ಎಂಬಂತೆ ಪಟಾಕಿ ಸಿಡಿದು ಇಡೀ ನಗರವೇ ನಡುಗಿ ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.