ಪ್ರಧಾನ ಸುದ್ದಿ

ಎಚ್.ಟಿ. ಸಾಂಗ್ಲಿಯಾನಾ ಭೂ ಅಕ್ರಮ ಆರೋಪಕ್ಕೆ ಪುಷ್ಟಿ

ಎಚ್.ಟಿ. ಸಾಂಗ್ಲಿಯಾನಾ ಭೂ ಅಕ್ರಮ ಆರೋಪಕ್ಕೆ ಪುಷ್ಟಿ
Published On :

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ ಸಾಂಗ್ಲಿಯಾನಾ ವಿರುದ್ಧದ ಭೂ ಅಕ್ರಮ ಆರೋಪಕ್ಕೆ ಪುಷ್ಟಿ ನೀಡುವ ಮತ್ತಷ್ಟು ದಾಖಲೆಗಳು ದೊರಕಿದ್ದು, ಅವರು ಸ್ವತಃ ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿಯೇ ಈ ಭೂಮಿಯ ಪ್ರಸ್ತಾಪವಾಗಿದೆ.

ಭೂ ಅಕ್ರಮದಲ್ಲಿ ಪಾಲುದಾರನಾಗಿದ್ದರೆ ದಾಖಲೆ ಮೂಲಕ ಸಾಬೀತುಪಡಿಸಿ ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ ರಾಮಸ್ವಾಮಿಗೆ ಸಾಂಗ್ಲಿಯಾನಾ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿರುವ ರಾಮಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಾಖಲೆ ಸಮೇತ ಪತ್ರ ಬರೆದಿದ್ದಾರೆ. ಸಾಂಗ್ಲಿಯಾನಾ ಭೂ ಅಕ್ರಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ರಾಮಸ್ವಾಮಿ ಆಗ್ರಹಿಸಿದ್ದಾರೆ. ತಮ್ಮ ಚುನಾವಣೆ ನಾಮಪತ್ರದ ಪ್ರಮಾಣಪತ್ರದಲ್ಲಿಯೇ ದಾಖಲೆಗಳನ್ನು ಸಲ್ಲಿಕೆ ಮಾಡಿ ಸಾಂಗ್ಲಿಯಾನಾ ಹಾಗೂ ಅವರ ಕುಟುಂಬ ಸದಸ್ಯರು ಪೇಚಿಗೆ ಸಿಲುಕಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಜಾಲ-2 ಹೋಬಳಿಯ ಗಡೇನಹಳ್ಳಿ ಗ್ರಾಮದಲ್ಲಿ 2 ಎಕರೆ ಗೋಮಾಳ ಭೂಮಿಯನ್ನು ಸಾಂಗ್ಲಿಯಾನಾ ಕುಟುಂಬ ಅಕ್ರಮವಾಗಿ ಖರೀದಿಸಿದೆ ಎನ್ನುವುದು ಆರೋಪವಾಗಿತ್ತು. ಇದನ್ನು ದಾಖಲೆ ಸಮೇತ ರಾಮಸ್ವಾಮಿ ಬಹಿರಂಗಗೊಳಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಮಾಜಿ ಸಂಸದ ಸಾಂಗ್ಲಿಯಾನಾ, ರಾಜಕೀಯ ಕಾರಣಕ್ಕೆ ಆರೋಪ ಹೊರಿಸಲಾಗಿದೆ ಎಂದು ಕಿಡಿಕಾರಿದ್ದರು. ಇದಲ್ಲದೇ ತಮ್ಮ ಕುಟುಂಬ ಇಂತಹ ಯಾವುದೇ ಅಕ್ರಮದಲ್ಲಿ ಪಾಲ್ಗೊಂಡಿಲ್ಲ ಎನ್ನುವುದು ಅವರ ಸ್ಪಷ್ಟನೆಯಾಗಿತ್ತು.

ಪ್ರಮಾಣಪತ್ರದಲ್ಲೇ ದಾಖಲೆ: 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಂಗ್ಲಿಯಾನಾ ಅವರು ಮಾ.27ರಂದು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಅವರು ತಮ್ಮ ಸ್ಥಿರಾಸ್ತಿಗಳ ಪಟ್ಟಿ ನೀಡಿದ್ದರು. ಅಲ್ಲಿ ಕೃಷಿ ಭೂಮಿ ಪಟ್ಟಿಯಲ್ಲಿ ಹೆಂಡತಿ ರತಂಗಪೊಯಿ ಅವರ ಹೆಸರಲ್ಲಿ 2 ಎಕರೆ ಭೂಮಿ ಹೊಂದಿದ್ದು, ಅದರ ಬೆಲೆ ರು. 3 ಲಕ್ಷ ಎಂದು ದಾಖಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.