ಹರಿಯಾಣದ ಪಾನ್ ವಾಲನಿಗೆ ೧೩೨ ಕೋಟಿ ರುಪಾಯಿ ವಿದ್ಯುತ್ ಬಿಲ್

ಚಂಡಿಗಢ: ವೀಳ್ಯೆದೆಲೆ ಸುತ್ತಿ ಪಾನ್ ಮಾಡಿ ಮಾರುವ ಹರ್ಯಾಣದ ಈ ಪಾನ್ ವಾಲಾನಿಗೆ ದೀಪಾವಳಿಯ ಶಾಕ್! ಅವರ ವಿದ್ಯುತಚ್ಚಕ್ತಿ ಬಿಲ್ ಬರೋಬರಿ ೧೩೨ ಕೋಟಿ ರುಪಾಯಿ.
ಸೋನಿಪತ್ ಜಿಲ್ಲೆಯ ಗೊಹಾನ ನಗರದಲ್ಲಿ ಪಾನ್ ಶಾಪ್ ನಡೆಸುವ ರಾಜೇಶ್ ಅವರಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್ ೧೩೨.೨೯ ಕೋಟಿ ರುಪಾಯಿ ಬಂದಿದೆ.
"ನನಗೆ ಬಿಲ್ ನೋಡಿ ಆಘಾತವಾಯಿತು. ಅಂಕಿಗಳಲ್ಲಿ ತಪ್ಪಾಗಿ ಅಚ್ಚಾಗಿರಬಹುದು ಎಂದಲ್ಲ. ಪದಗಳಲ್ಲಿ ಬರೆದ ಆ ಮೊತ್ತ ಕೂಡ ಅಷ್ಟೇ" ಎನ್ನುತ್ತಾರೆ ರಾಜೇಶ್.
"ನಾನು ಸರಳ ಮನುಷ್ಯ, ಬಾಡಿಗೆಯಲ್ಲಿ ಸಣ್ಣ ಅಂಗಡಿ ನಡೆಸುತ್ತೇನೆ. ಒಂದು ಫ್ಯಾನ್ ಮತ್ತು ಒಂದು ಬಲ್ಬ್ ಉರಿಸುತ್ತೇನೆ. ಸಾಮಾನ್ಯವಾಗಿ ನನ್ನ ವಿದ್ಯುತ್ ಬಿಲ್ ೧೦೦೦ ರುಪಾಯಿಗಿಂತಲೂ ಕಡಿಮೆಯಿರುತ್ತದೆ. ಇದು ನಿಜಕ್ಕೂ ಆಘಾತ" ಎನ್ನುತ್ತಾರೆ.
ಶುಕ್ರವಾರ ವಿದ್ಯುತ್ ಕಛೇರಿಗೆ ಬೇಟಿ ಕೊಟ್ಟು ಬಿಲ್ಲನ್ನು ಸರಿಪಡಿಸಿಕೊಳ್ಳುತ್ತೇನೆ ಎನ್ನುತ್ತಾರೆ ರಾಜೇಶ್.
ಉತ್ತರ ಹರಿಯಾಣ ವಿದ್ಯುತ್ ಪ್ರಸರಣ ನಿಗಮ (ಯು ಎಚ್ ಬಿ ವಿ ಎನ್) ಈ ಬಿಲ್ ನೀಡಿದೆ.
ಈ ರೀತಿಯ ಪ್ರಮಾದಗಳು ಹಿಂದೆಯೂ ನಡೆದಿವೆ. ಏಪ್ರಿಲ್ ೨೦೦೭ ರಲ್ಲಿ ನಾರ್ನುಲ್ ನಗರದ ಎರಡು ಕೋಣೆಯ ಮನೆಯ ವ್ಯಕ್ತಿ ಮುರಾರಿ ಲಾಲ್ ಅವರಿಗೆ ೨೩೪ ಕೋಟಿಯ ವಿದ್ಯುತ್ ಬಿಲ್ ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


