ಪ್ರಧಾನ ಸುದ್ದಿ

ಗೋಡ್ಸೆ, ಗಾಂಧಿ ಹತ್ಯೆ ಮಾಡುವ ಬದಲು ನೆಹರೂ ಅವರನ್ನು ಹತ್ಯೆ ಮಾಡಬೇಕಿತ್ತು!

ಗೋಡ್ಸೆ, ಗಾಂಧಿ ಹತ್ಯೆ ಮಾಡುವ ಬದಲು ನೆಹರೂ ಅವರನ್ನು ಹತ್ಯೆ ಮಾಡಬೇಕಿತ್ತು!
Published On :

ತಿರುವನಂತಪುರಂ: ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಗುಂಡಿಕ್ಕಿ ಸಾಯಿಸುವ ಬದಲು ನೆಹರೂ ಅವರನ್ನು ಹತ್ಯೆಗೈಯ್ಯಬೇಕಿತ್ತು! ಎಂದು ಕೇರಳ ಆರೆಸ್ಸೆಸ್ಸ್ ಘಟಕ ತಮ್ಮ ಮುಖವಾಣಿ ಕೇಸರಿಯಲ್ಲಿ ಪ್ರಕಟವಾಗಿರುವ ಲೇಖನವೊಂದರಲ್ಲಿ ಹೇಳಿದೆ.

ಭಾರತದ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಶ ವಿಭಜನೆಯ ಬಗ್ಗೆ ಓದುವಾಗ ಗಾಂಧೀಜಿಯವರನ್ನು ಸಾಯಿಸಿ ಗೋಡ್ಸೆ ನಿಜವಾಗಿಯೂ ತಪ್ಪು ಮಾಡಿದ್ದಾರೆ. ಅವರ ಗುರಿ ತಪ್ಪಾಗಿತ್ತು ಎಂಬ ನಿರ್ಧಾರಕ್ಕೆ ಬರುತ್ತಾರೆ ಎಂದು ಈ ಲೇಖನದಲ್ಲಿ ಹೇಳಲಾಗಿದೆ.

ಪ್ರಸ್ತುತ ಲೇಖನವನ್ನು ಕಳೆದ ವರ್ಷ ಚಾಲಕ್ಕುಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬಿ.ಗೋಪಾಲಕೃಷ್ಣನ್ ಎಂಬವರು ಬರೆದಿದ್ದು,  ದೇಶ ವಿಭಜನೆಯ ವೇಳೆ ನೆಹರು ಸ್ವಾರ್ಥದ ರಾಜಕಾರಣ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ದೇಶ ವಿಭಜನೆಯ ಬಗ್ಗೆ ಬ್ರಿಟಿಷರ ಜತೆ ಮಾತುಕತೆ ನಡೆಸುವಾಗ ನೆಹರು ಬೇಕು ಬೇಕೆಂದೇ ಗಾಂಧೀಜಿಯವರನ್ನು ದೂರವಿರಿಸಿದ್ದರು. ಗಾಂಧಿಯವರ ಖಾದಿ ಮತ್ತು ಟೋಪಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಸಂಕೇತವಾಗಬೇಕೆಂದು ನೆಹರೂ ಬಯಸಿದ್ದರು ಎಂದು ಈ ಲೇಖನದಲ್ಲಿ ಹೇಳಲಾಗಿದೆ. ದೇಶ ವಿಭಜನೆ ಮತ್ತು ಗಾಂಧಿ ಹತ್ಯೆ ಸಂಭವಿಸಲು ನೆಹರೂ ಅವರ ಸ್ವಾರ್ಥ ರಾಜಕೀಯವೇ ಕಾರಣವಾಗಿತ್ತು. ಆದಾಗ್ಯೂ, ಗೋಡ್ಸೆ ನೆಹರೂಗಿಂತ ಒಳ್ಳೆಯ ಮನುಷ್ಯ. ಯಾಕೆಂದರೆ ಆತ ಗಾಂಧೀಜಿಯನ್ನು ಶಾರೀರಿಕವಾಗಿ ಹತ್ಯೆಗೈದ. ಗೋಡ್ಸೆ ಗಾಂಧೀಜಿಗೆ ಗೌರವ ಸಲ್ಲಿಸಿ ಅವರ ಎದೆಗೆ ಗುಂಡು ಹಾರಿಸಿದ್ದ, ಆದರೆ ನೆಹರೂ ಗಾಂಧಿಯವರನ್ನು ಆಲಂಗಿಸಿ ಬೆನ್ನಿಗೆ ಚೂರಿ ಹಾಕಿದ್ದರು ಎಂದು ಗೋಪಾಲಕೃಷ್ಣನ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಏತನ್ಮಧ್ಯೆ, ಕೇಸರಿಯಲ್ಲಿ ಪ್ರಕಟವಾದ ಈ ಲೇಖನ ಕೇರಳ ರಾಜಕೀಯದಲ್ಲಿ ವಿವಾದವನ್ನು ಸೃಷ್ಟಿಸಿದೆ. ಈ ಬಗ್ಗೆ  ತನಿಖೆ ನಡೆಸುವಂತೆ ಹಾಗು ಪ್ರಸ್ತುತ ವಾರ ಪತ್ರಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವ ರಮೇಶ್ ಚೆನ್ನಿತಲ ಕೇರಳ ಪೊಲೀಸರಿಗೆ ಆದೇಶಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.