ಪ್ರಧಾನ ಸುದ್ದಿ

ಫೇಸ್ ಬುಕ್ ಗೆ ಬಂದ ಸ್ಟೀಫನ್ ಹಾಕಿಂಗ್

ಫೇಸ್ ಬುಕ್ ಗೆ ಬಂದ ಸ್ಟೀಫನ್ ಹಾಕಿಂಗ್
Published On :

ನ್ಯೂಯಾರ್ಕ್: ವಿಶ್ವವಿಖ್ಯಾತ ವಿಜ್ಞಾನಿ, ಭೌತಶಾಸ್ತ್ರ ಪ್ರೊಫೆಸರ್ ಸ್ಟಿಫನ್ ಹಾಕಿಂಗ್ ಈಗ ಫೇಸ್ ಬುಕ್ ಗೆ ಬಂದಿದ್ದಾರೆ ಮತ್ತು ತಮ್ಮ ಅಭಿಮಾನಿಗಳಿಗೆ ಯಾವಾಗಲು ಕುತೂಹಲದಿಂದಿರಲು ಹೇಳಿದ್ದಾರೆ.

ತಮ್ಮ ಪ್ರಥಮ ಫೇಸ್ ಬುಕ್ ಪೋಸ್ಟ್ ನಲ್ಲಿ "ಈ ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಯಾವಾಗಲೂ ಚಕಿತನಾಗಿದ್ದೇನೆ. ಸಮಯ(Time) ಮತ್ತು ಸ್ಥಾನ(Space) ಯಾವಗಲು ನಿಗೂಢವಾಗಿಯೆ ಇರಬಹುದು ಆದರೆ ಅವುಗಳನ್ನು ತಿಳಿದುಕೊಳ್ಳುವ ನನ್ನ ಕುತೂಹಲ ಎಂದಿಗೂ ನಿಂತಿಲ್ಲ" ಎಂದಿದ್ದಾರೆ.

"ನಮ್ಮ ಸಂಬಂಧಗಳು ಅಂಕೆಯಿಲ್ಲದೆ ಬೆಳೆಯುತ್ತಿದೆ, ಇದರ ಭಾಗವಾಗಲು ಈಗ ನನಗೆ ಅವಕಾಶ ಸಿಕ್ಕಿದ್ದು ಇನ್ನುಮುಂದೆ ನನ್ನ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಕುತೂಹಲದಿಂದಿರಿ, ನಾನು ಯಾವಾಗಲೂ ಹಾಗೆಯೇ ಇದ್ದೇನೆ" ಎಂದು ಸೇರಿಸಿದ್ದಾರೆ.

ಹಾಕಿಂಗ್ ಅವರ ಪುಟ ಇಲ್ಲಿಯವರೆಗೆ ೯,೦೦,೦೦೦ ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

 "ದ ಥಿಯರಿ ಆಫ್ ಎವೆರಿಥಿಂಗ್' ಹೆಸರಿನಲ್ಲಿ ಸ್ಟೀಫನ್ ಹಾಕಿಂಗ್ ಅವರ ಅವರ ಜೀವನ ಸಿನೆಮಾ ಆಗುತ್ತಿರುವುದರಿಂದ ಅವರ ಪುಟದ ಲೈಕ್ ಗಳು ಅಸಂಖ್ಯಾತವಾಗಿ ಬೆಳೆಯಲಿದೆ ಎಂದು ಮೀಡಿಯಾ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.