ಪ್ರಧಾನ ಸುದ್ದಿ

ಬಿಜೆಪಿ ದೆಹಲಿಯಲ್ಲಿ ನಕಲಿ ಮತಗಳನ್ನು ಸೃಷ್ಟಿಸುತ್ತಿದೆ: ಎ ಎ ಪಿ

ಬಿಜೆಪಿ ದೆಹಲಿಯಲ್ಲಿ ನಕಲಿ ಮತಗಳನ್ನು ಸೃಷ್ಟಿಸುತ್ತಿದೆ: ಎ ಎ ಪಿ
Published On :

ನವದೆಹಲಿ: ಬಿಜೆಪಿಯ ಹಿರಿಯನಾಯಕರೊಬ್ಬರು ಪ್ರತಿಯೊಂದು ಕ್ಷೇತ್ರದಲ್ಲೂ ೫೦೦೦ ನಕಲಿ ಮತದಾರರನ್ನು ಸೃಷ್ಟಿಸಿ ಗೆಲ್ಲಲು ತನ್ನ ಅಭ್ಯರ್ಥಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿಂದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ಈ ಆಪಾದನೆಯನ್ನು ತಳ್ಳಿ ಹಾಕಿದೆ.

ಕೇಜ್ರಿವಾಲ್ ಬರೆದ ಟ್ವೀಟ್ ನಲ್ಲಿ "ಬಿಜೆಪಿ ಮೂಲ- ಹಿರಿಯ ಬಿಜೆಪಿ ನಾಯಕರೊಬ್ಬರು ದೆಹಲಿಯ ತನ್ನೆಲ್ಲಾ ಶಾಸಕರಿಗೆ ಎಲ್ಲ ಕ್ಷೇತ್ರಗಳಲ್ಲೂ ಕನಿಷ್ಠ ೫೦೦೦ ನಕಲಿ ಮತಗಳನ್ನು ಸೃಷ್ಟಿಸಿ ಮತ್ತು ಎ ಎ ಪಿ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕಿ ಎಂದು ಸೂಚಿಸಿದ್ದಾರೆ" ಎಂದು ಬರೆದಿದ್ದಾರೆ.

"ಲಂಚದ ದರ - ಒಂದು ನಕಲಿ ಮತಕ್ಕೆ ೧೫೦೦ ರೂ, ಒಂದು ಮತವನ್ನು ಪಟ್ಟಿಯಿಂದ ತೆಗೆಯಲು ೨೦೦ ರೂ.  ಕಳೆದ ವಾರ ಬಿಜೆಪಿ ಗೆ ಈ ಕೆಲಸ ಮಾಡಿದವನೇ ಈ ವಿಷಯ ಹೇಳಿದ್ದು" ಎಂದು ಮತ್ತೊಂದು ಟ್ವೀಟ್ ನಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಬರೆದಿದ್ದಾರೆ.

"ಸೋಮವಾರ ಬೆಳಗ್ಗೆ ೧೧ ಘಂಟೆಗೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಅಧಿಕೃತವಾಗಿ ದೂರು ಕೊಡುತ್ತೇವೆ" ಎಂದು ಮತ್ತೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.,

ಮೋದಿ ಅಲೆ ಇದ್ದೂ ದೆಹಲಿಯಲ್ಲಿ ಚುನಾವಣೆ ಘೋಷಿಸಲು ಬಿಜೆಪಿ ಹೆದರಿರುವುದೇಕೆ ಎಂದು ಮೋದಿ ಅಲೆಯ ಬಗ್ಗೆ ಕುಹಕವಾಡಿದ್ದು, ನನ್ನ ಮೂಲಗಳ ಪ್ರಕಾರ ಬಿಜೆಪಿ ಯ ಆಂತರಿಕ ಸರ್ವೇಕ್ಷಣೆಯಲ್ಲಿ ಇಂದು ಚುನಾವಣೆ ನಡೆದರೆ ಎಎಪಿ ಗೆ ನಿಚ್ಚಳ ಬಹುಮದ ಬರುತ್ತದೆ ಎಂದಿದೆ" ಆದುದರಿಂದ ಬಿಜೆಪಿ ಚುನಾವಣೆಯಿಂದ ದೂರಕ್ಕೆ ಓಡುತ್ತಿದೆ, ಎಎಪಿ ಚುನಾವಣೆಗೆ ಸರ್ವಸಿದ್ಧ" ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರವರಿ ೧೭ ರಿಂದ ದೆಹಲಿ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ.

ಈ ಮಧ್ಯೆ, ಆಪ್ ತನ್ನ ಜನಪ್ರಿಯತೆ, ಜನರ ಸಹಾಯ ಮತ್ತು ಸ್ವಯಂಸೇವಕರನ್ನು ಬೇಗನೆ ಕಳೆದುಕೊಳ್ಳುತ್ತಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.

"ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಜಾಲಗಳಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆವರು ಬಿಜೆಪಿ ವಿರುದ್ಧ ಸಲ್ಲದ ಆಪಾದನೆ ಮಾಡುತ್ತಿರುವುದು ಏಕೆಂದರೆ, ನಾವು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡರೆ ಅವರು ಮತ್ತೆ ಸುದ್ದಿಯಲ್ಲಿರಬಹುದೆಂಬ ಆಸೆಯಿಂದ... ಆದರೆ ನಾವು ಆ ಅವಕಾಶ ಕೊಡುವುದಿಲ್ಲ" ಎಂದು ಉಪಾಧ್ಯಾಯ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

...ಕೇಜ್ರಿವಾಲ್ ಬಿಜೆಪಿ ವಿರುದ್ದ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದಲ್ಲದೆ, ವಿಶ್ವದಾದ್ಯಂತ ಗೌರವಿಸುವ ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತ ನಿಲುವನ್ನು ಕೂಡ ಪ್ರಶ್ನಿಸುತ್ತಿದ್ದಾರೆ ಎಂದು ಕೂಡ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.