ಪ್ರಧಾನ ಸುದ್ದಿ

ಲಂಡನ್ ನಲ್ಲಿ ಕಾಶ್ಮೀರದ ಸ್ವಾಯತ್ತತೆ ನಡಿಗೆ: ಭಿಲಾವಲ್ ಭುಟ್ಟೋಗೆ ತಡೆ

ಲಂಡನ್ ನಲ್ಲಿ ಕಾಶ್ಮೀರದ ಸ್ವಾಯತ್ತತೆ ನಡಿಗೆ: ಭಿಲಾವಲ್ ಭುಟ್ಟೋಗೆ ತಡೆ
Published On :

ಲಂಡನ್: ಕಾಶ್ಮೀರದಲ್ಲಿ ಭಾರತದ ಹಿಡಿತವನ್ನು ವಿರೋಧಿಸಿ ಲಂಡನ್ ನಲ್ಲಿ  ಆಯೋಜಿಸಿದ್ದ ರ್ಯಾಲಿಯಲ್ಲಿ, ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಭಿಲಾವಲ್ ಭುಟ್ಟೊ ಕಾಣಿಸಿಕೊಂಡ ನಂತರ ಹಿಂಸೆಗೆ ತಿರುಗಿದ ಘಟನೆ ನಡೆದಿದೆ. ಟ್ರಫಲ್ಗರ್ ವೃತ್ತದಿಂದ ಡೌವ್ನಿಂಗ್ ಬೀದಿಯೆಡೆಗೆ ತೆರಳುತ್ತಿದ್ದ ನಡಿಗೆಗೆ ಈ ನಾಯಕ ಸೇರಿಕೊಂಡಾಗ, ನೀರಿನ ಬಾಟಲ್ ಗಳ, ಕ್ಯಾನ್ ಗಳ ಸ್ವಾಗತ ಸಿಕ್ಕಿ ಭದ್ರತೆಯೊಂದಿಗೆ ಅವರನ್ನು ಸುರಕ್ಷಿತ ಜಾಗಕ್ಕೆ ಕರೆದುಕೊಂಡ ಹೋಗಲಾಗಿದೆ.

ಮಿಲಿಯನ್ ಮಾರ್ಚ್ ಎಂದು ಕರೆಯಲಾಗಿದ್ದ ಈ ನಡಿಗೆಯ ತಾತ್ಕಾಲಿಕ ವೇದಿಕೆಗೆ ಮಾತನಾಡಲು ಭಿಲಾವಲ್ ಭುಟ್ಟೊ ಜರ್ದಾರಿ ಕಾಣಿಸಿಕೊಂಡಾಗ ಸಭೆ ಅಸ್ಥವ್ಯಸ್ಥಗೊಂಡಿದೆ.

"ಇದು ಕಾಶ್ಮೀರಿಗಳ ಕಲ್ಯಾಣಕ್ಕೆ ಕಾಶ್ಮೀರಿಗಳು ನಡೆಸಿದ ನಡಿಗೆ. ಭಿಲಾವಲ್ ಭುಟ್ಟೋಗು ಇದಕ್ಕೂ ಯಾವುದೇ ಸಂಬಧ ಇಲ್ಲ" ಎಂದು ಅಲ್ಲಿ ನೆರಿದಿದ್ದ ಕೋಪಗೊಂಡ ಯುವಕರ ಪಡೆ ಹೇಳಿದೆ.

ಈ ಪಥನಡಿಗೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಮಂತ್ರಿ ಬ್ಯಾರಿಶ್ಟರ್ ಸುಲ್ತಾನ್ ಮಹಮದ್ ಚೌದರಿ ಅವರ ನಾಯಕತ್ವ ಇತ್ತು ಮೀರ್ ಪುರಿ ಮೂಲದ ಬ್ರಿಟಿಶ್ ಶಾಸಕ ಲಾರ್ಡ್ ನಾಜಿರ್ ಅಹಮದ್ ಅವರ ಬೆಂಬಲ ಕೂಡ ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.