ಪ್ರಧಾನ ಸುದ್ದಿ

ಕಪ್ಪು ಖಾತೆ ಬಹಿರಂಗಕ್ಕೆ ಸ್ವಿಟ್ಸರ್ ಲ್ಯಾಂಡ್ ಅಸಮಾಧಾನ

ಕಪ್ಪು ಖಾತೆ ಬಹಿರಂಗಕ್ಕೆ ಸ್ವಿಟ್ಸರ್ ಲ್ಯಾಂಡ್ ಅಸಮಾಧಾನ
Published On :

ವಾಶಿಂಗ್ ಟನ್:  ಸ್ವಿಟ್ಸರ್ ಲ್ಯಾಂಡ್  ನಲ್ಲಿ ತೆರಿಗೆ ವಂಚನೆ ಕ್ರಿಮಿನಲ್ ಅಪರಾಧ ಅಲ್ಲದಿರುವುದರಿಂದ, ಭಾರತ ಸ್ವಿಸ್ ಬ್ಯಾಂಕ್ ಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವವರ ಕೆಲವರ ಹೆಸರುಗಳನ್ನು ಬಹಿರಂಗ ಪಡಿಸಿದ ಹಿನ್ನಲೆಯಲ್ಲಿ ಭಾರತದ ಜೊತೆ ಭಿನ್ನಾಭಿಪ್ರಾಯಗಳಿವೆ ಎಂದು ಸ್ವಿಟ್ಸರ್ ಲ್ಯಾಂಡ್ ನ ಅಧಿಕಾರಿ ಒಪ್ಪಿಕೊಂಡಿದ್ದಾರೆ.

ಭಾರತದ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿದ್ದೇವೆ ಎಂದು ಸ್ವಿಸ್ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ವಿಸ್ ವಿದೇಶಾಂಗ ಸಚಿವಾಲಯದ ಕಾನೂನು ಸಲಹೆಗಾರ ವ್ಯಾಲೆಂಟಿನ್ ಜೆಲ್ಲ್ವೆಗರ್ ಮಾತನಾಡಿ "ಭಾರತ ಸ್ವಿಸ್ ಬ್ಯಾಂಕ್ ಗಳಲ್ಲಿ ಹಣ ಇಟ್ಟು ತೆರಿಗೆ ವಂಚನೆ ಮಾಡಿದ ವ್ಯಕ್ತಿಗಳನ್ನಷ್ಟೇ ಬಹಿರಂಗಪಡಿಸಿದೆ. ಬೇರೇನೋ ಅಕ್ರಮ ಇಲ್ಲಿಲ್ಲ ಎಂದಿದ್ದಾರೆ."

ನಾವು ಭಾರತ ಸರ್ಕಾರದ ಜೊತೆ ಸುಧೀರ್ಗ ಚರ್ಚೆ ನಡೆಸಿದ್ದೇವೆ. ಅದು ತೆರಿಗೆ ವಂಚನೆಯ ಬಗ್ಗೆ ಮಾತ್ರ. ತೆರಿಗೆ ವಂಚನೆ ಸ್ವಿಸ್ ನ್ಯಾಯದ ಪ್ರಕಾರ ಕ್ರಿಮಿನಲ್ ಅಲ್ಲ. ಆದರೆ ಅದು ಈಗ ಬದಲಾಗುತ್ತಿದೆ. ಅಂತರಾಷ್ಟ್ರೀಯ ಕಾನೂನಿಗೆ ಈಗ ನಾವು ಹೊಂದಿಕೊಳ್ಳುತ್ತೇವೆ" ಎಂದು ವಾಶಿಂಗ್ ಟನ್ ನಲ್ಲಿ ತಿಳಿಸಿದ್ದಾರೆ.

"ಇದೇ ವಿವಾದದ ಮೂಲ. ನಾವು ಏನೆಲ್ಲಾ ಮಾಹಿತಿ ಅವರಿಗೆ ನೀಡಬೇಕು ಎಂಬುದು ನಮ್ಮಿಬ್ಬರ ಮಧ್ಯೆ ಇರುವ ಭಿನಾಭಿಪ್ರಾಯ. ಈಗ ಭಾರತದಲ್ಲಿ ಹೊಸ ಸರ್ಕಾರವಿದೆ. ಅತಿ ಬೇಗನೆ ವಿವಾದ ಬಗೆ ಹರಿಯಲಿದೆ ಎಂದು ನಂಬಿದ್ದೇವೆ" ಎಂದಿದ್ದಾರೆ.

ನೆನ್ನೆ ಭಾರತ ಸರ್ಕಾರ ಸುಪ್ರೀಂ ಕೋರ್ಟ್ ಗೆ  ಸ್ವಿಟ್ಸರ್ ಲ್ಯಾಂಡ್ ನಲ್ಲಿ ಕಪ್ಪು ಹಣ ಇಟ್ಟಿರುವ ಮೂವರ ಹೆಸರನ್ನು ಬಹಿರಂಗಪಡಿಸಿತ್ತು. ಆ ಪಟ್ಟಿಯಲ್ಲಿ ಹೆಚ್ಚುವರಿ ಕಾಂಗ್ರೆಸ್ ಪಕ್ಷದ ನಾಲ್ಕು ನಾಯಕರ  ಹೆಸರೂ ಒಳಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.