ಪ್ರಧಾನ ಸುದ್ದಿ

'ಮನ್ ಕೀ ಬಾತ್'ನಲ್ಲಿ ಜನಾಭಿಪ್ರಾಯವನ್ನು ಓದಲಿದ್ದಾರೆ ಮೋದಿ

'ಮನ್ ಕೀ ಬಾತ್'ನಲ್ಲಿ ಜನಾಭಿಪ್ರಾಯವನ್ನು ಓದಲಿದ್ದಾರೆ ಮೋದಿ
Published On :

ನವದೆಹಲಿ: ನವೆಂಬರ್ 2ರಂದು ಪ್ರಸಾರವಾಗಲಿರುವ ರೇಡಿಯೋ ಸಂದೇಶ ಮನ್ ಕೀ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಜನಾಭಿಪ್ರಾಯಗಳನ್ನೂ ಓದಲಿದ್ದಾರೆ.

ಕಳೆದ ಬಾರಿ ಅಕ್ಟೋಬರ್ 3ರಂದು ಆಕಾಶವಾಣಿಯಲ್ಲಿ ಮನ್ ಕೀ ಬಾತ್ ಪ್ರಸಾರವಾದಾಗ ಅದಕ್ಕೆ ಸಿಕ್ಕಿದ ಜನರ ಪ್ರತಿಕ್ರಿಯೆಯನ್ನು ಮೋದಿ ಈ ಬಾರಿ ಓದಲಿದ್ದಾರೆ.

 ಸ್ವಚ್ಛ ಭಾರತ ಮಿಷನ್, ಕೃಷಿ, ಜಲಸಂಪನ್ಮೂಲದ ಸಮಸ್ಯೆ, ಮಹಿಳಾ ಸಬಲೀಕರಣದ ಬಗ್ಗೆ ಜನರ ಅಭಿಪ್ರಾಯಗಳು ನನ್ನ ಕೈ ಸೇರಿದ್ದು, ಅದನ್ನು ನಾನು ಓದಲು ಇಚ್ಛಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮನ್ ಕೀ ಬಾತ್ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, MyGov Open Forum ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸುತ್ತಿರಿ. ಅದರಲ್ಲಿ ಕೆಲವನ್ನು ನಾನು  ಮುಂದಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಓದುತ್ತೇನೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.