ಕಪ್ಪುಹಣ: ಕೇಂದ್ರ ನೀಡಿದ ಪಟ್ಟಿಯಲ್ಲಿಲ್ಲ ಯಾವುದೇ ದೊಡ್ಡ ಹೆಸರು?
ನವದೆಹಲಿ: ಕಪ್ಪುಹಣದ ವಿರುದ್ಧ ದೇಶದಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ದೊಡ್ಡ ಮಟ್ಟದ ಯಶಸ್ಸು ದೊರೆಯುವ ಸಾಧ್ಯತೆ ಕಡಿಮೆ. ಏಕೆಂದರೆ ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ 627 ಕಪ್ಪು ಹಣದ ಖಾತೆದಾರರ ಪೈಕಿ ಯಾವುದೇ ದೊಡ್ಡ ಉದ್ಯಮಿ ಅಥವಾ ಪ್ರಮುಖ ರಾಜಕಾರಣಿಯ ಹೆಸರು ಇಲ್ಲ ಎಂದು ಗುರುವಾರ ಮೂಲಗಳು ತಿಳಿಸಿವೆ.
ಮೂಲಗಳನ್ನೇ ನಂಬುವುದಾದರೆ, ಭಾರತಕ್ಕೆ ಬರುವ ಕಪ್ಪು ಹಣದ ಮೊತ್ತ ಬಹಳ ಕಡಿಮೆ. ಸುಮಾರು 350 ಮಂದಿ ಮಾತ್ರ ತೆರಿಗೆ ವಂಚಿಸಿ, ವಿದೇಶಿ ಬ್ಯಾಂಕ್ಗಳಲ್ಲಿ ಹಣ ಇಟ್ಟಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಆದರೆ ಇವರ ಖಾತೆಯಲ್ಲಿರುವುದು ಕೇವಲ 40ರಿಂದ 50 ಕೋಟಿ ಕಪ್ಪು ಹಣ ಮಾತ್ರ. ಹೀಗಾಗಿ ಭಾರಿ ಮೊತ್ತದ ಕಪ್ಪುಹಣ ಭಾರತಕ್ಕೆ ಬರುತ್ತದೆ ಎಂಬ ನಿರೀಕ್ಷೆ ಸುಳ್ಳು. ಇನ್ನುಳಿದಂತೆ ಪಟ್ಟಿಯಲ್ಲಿ ಅನಿವಾಸಿ ಭಾರತೀಯರಿದ್ದು, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಬರುವುದಿಲ್ಲ ಎನ್ನಲಾಗಿದೆ.
ಈ ಮಧ್ಯೆ ಕಪ್ಪು ಹಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಸಾರ್ವಜನಿಕರಿಂದ ಮಾಹಿತಿ ಕೋರಿದ್ದು, ಕಪ್ಪಹಣದ ಬಗ್ಗೆ ಮಾಹಿತಿ ಇದ್ದರೆ ಇ-ಮೇಲ್ ಮೂಲಕ ತಿಳಿಸುವಂತೆ ಮನವಿ ಮಾಡಿದೆ.
ಕಪ್ಪುಹಣದ ಬಗ್ಗೆ ಸಾರ್ವಜನಿಕರು ಸಹ ಮಾಹಿತಿ ನೀಡಬಹುದು. ಅವರು ನೀಡಿದ ಮಾಹಿತಿ ಕುರಿತು ನಾವು ತನಿಖೆ ನಡೆಸುತ್ತೇವೆ. ಆದರೆ ನಾವು ಖಚಿತ ಮಾಹಿತಿ ಬಯಸುತ್ತೇವೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

