ಶಾಲೆ ಕಟ್ಟಲು ೫೦ ಸಾವಿರ ಡಾಲರ್ ದೇಣಿಗೆ ಕೊಟ್ಟ ಮಲಾಲ

ಲಂಡನ್: ೨೦೧೪ ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ೧೭ ವರ್ಷದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಪಾಕಿಸ್ತಾನಿ ಬಾಲಕಿ ಮಲಾಲ ಯೂಸಪ್ಹ್ ಝಾಯಿ ಯುದ್ಧದಲ್ಲಿ ಹಾನಿಗೊಂಡ ಗಾಜಾ ಪ್ರದೇಶದಲ್ಲಿ ವಿಶ್ವಸಂಸ್ಥೆಯ ಶಾಲೆಗಳನ್ನು ಮತ್ತೆ ಸ್ಥಾಪಿಸಲು ೫೦೦೦೦ ಯು ಎಸ್ ಡಾಲರ್ ಗಳನ್ನು ದೇಣಿಗೆ ಕೊಟ್ಟಿದ್ದಾರೆ.
ಪ್ಯಾಲೆಸ್ಟೆನಿಯನ್ ಮಕ್ಕಳಿಗೆ ಮತ್ತು ಎಲ್ಲ ಭಾಗದ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡುವತ್ತ ಮತ್ತು ಅವರಿಗೆ ಉತ್ತಮ ವಾತಾವರಣ ನಿರ್ಮಿಸುವತ್ತ ನಾವೆಲ್ಲರೂ ಒಟ್ಟಿಗೆ ಶ್ರಮಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಶಿಕ್ಷಣದ ಹೊರತು ಶಾಂತಿ ಸಾಧ್ಯವಿಲ್ಲ ಎಂದಿದ್ದಾರೆ.
ಶಾಲೆಗೆ ತೆರಳುವಾಗ ಸ್ವಾತ್ ಕಣಿವೆಯಲ್ಲಿ ತಾಲೀಬನರಿಂದ ಗುಂಡೇಟು ತಿಂದು, ಬದುಕುಳಿದಿದ್ದ ಮಲಾಲ ಅವರಿಗೆ ಲಂಡನ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಕ್ಕಳ ಹಕ್ಕುಗಳಿಗೆ ಮತ್ತು ಶಿಕ್ಷಣಕ್ಕೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಮಲಾಲ ಅವರಿಗೆ ೨೦೧೪ ರಲ್ಲಿ ಸ್ವೀಡನ್ ಮೂಲದ ಸಂಸ್ಥೆ ಭಾರದ ಕೈಲಾಶ್ ಸತ್ಯಾರ್ಥಿ ಅವರ ಜೊತೆಗೆ ಮಲಾಲ ಅವರಿಗೂ ನೊಬೆಲ್ ಪ್ರಶಸ್ತಿಯನ್ನು ನೀಡಿತ್ತು.
ನೆನ್ನೆಯಷ್ಟೇ ಸ್ಟಾಕ್ ಹಾಂ ನಲ್ಲಿ ಪ್ರದಾನ ಮಾಡಲಾದ "ವಿಶ್ವ ಮಕ್ಕಳ ಪ್ರಶಸ್ತಿ" ಕಾರ್ಯಕ್ರಮದಲ್ಲಿ ಮಾತನಾಡಿದ ಮಲಾಲ ಅವರು ಶಾಲೆಗಳ ಮರುನಿರ್ಮಾಣಕ್ಕೆ ಹಣ ನೀಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


