ಪ್ರಧಾನ ಸುದ್ದಿ

ವಿಶ್ವಾಸಮತಕ್ಕೆ ಮುನ್ನ ನಿರ್ಧಾರ ತೆಗೆದುಕೊಳ್ಳಿ: ಶಿವಸೇನೆ

ವಿಶ್ವಾಸಮತಕ್ಕೆ ಮುನ್ನ ನಿರ್ಧಾರ ತೆಗೆದುಕೊಳ್ಳಿ: ಶಿವಸೇನೆ
Published On :

ಮುಂಬೈ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕರೆ ಸ್ವೀಕರಿಸಿ ಶುಕ್ರವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಶಿವಸೇನಾ ಮುಖಸ್ಥ ಉದ್ಧವ್ ಠಾಕ್ರೆ, ಮೈತ್ರಿ ಬಗ್ಗೆ ವಿಶ್ವಾಸಮತಕ್ಕೆ ಮುನ್ನ ನಿರ್ಧಾರ ತೆಗೆದುಕೊಳ್ಳಿ ಎಂದು ಬಿಜೆಪಿಗೆ ಹೇಳಿದ್ದಾರೆ.

ಫಡ್ನವಿಸ್ ಅವರ ಸರ್ಕಾರ ನವೆಂಬರ್ 15ರಂದು ವಿಶ್ವಾಸ ಮತ ಬಯಸಲಿದ್ದು, ಮೈತ್ರಿ ಮಾಡುವ ಬಗ್ಗೆ ವಿಶ್ವಾಸಮತಕ್ಕೆ ಮುನ್ನ ನಿರ್ಧಾರ ತೆಗೆದು ಕೊಳ್ಳಬೇಕೆಂದು ಬಿಜೆಪಿ ಶಿವಸೇನೆಗೆ ಹೇಳಿತ್ತು.

ಆದಾಗ್ಯೂ, ಶಿವಸೇನೆಯ ಷರತ್ತುಗಳಿಗೆ ಬಿಜೆಪಿ ಬದ್ಧವಾಗದೇ ಇದ್ದರೆ, ವಿಶ್ವಾಸಮತ ಯಾಚನೆಯ ವೇಳೆ ತಾವು ನಿಮಗೆ ಬೆಂಬಲ ನೀಡಲ್ಲ ಎಂದು ಶಿವಸೇನೆಯ ಮೂಲಗಳು ಹೇಳಿವೆ.

288  ಸದಸ್ಯರಿರುವ ಮಹಾ ವಿಧಾನಸಭೆಯಲ್ಲಿ ಬಿಜೆಪಿ 121 ಸೀಟುಗಳನ್ನು ಗಳಿಸಿಕೊಂಡಿದ್ದು, ಸರ್ಕಾರ ರಚನೆಗೆ ಇನ್ನು 24 ಸೀಟುಗಳನ್ನು ಗಳಿಸಿಕೊಳ್ಳಬೇಕಾಗಿದೆ. ಈಗಾಗಲೇ ಕೆಲವು ಸಣ್ಣ ಪುಟ್ಟ ಪಕ್ಷಗಳ ಹಾಗೂ 7 ಸ್ವತಂತ್ರ ಶಾಸಕರ ಬೆಂಬಲ ನಮಗಿದೆ ಎಂದು ಬಿಜೆಪಿ ಹೇಳಿದೆ.

ಮಹಾ ಚುನಾವಣೆಯಲ್ಲಿ ಶಿವಸೇನೆ  63 ಸೀಟುಗಳನ್ನು ಗಳಿಸಿಕೊಂಡಿದ್ದು, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿದೆ.  41 ಸೀಟುಗಳನ್ನು ಹೊಂದಿರುವ ಎನ್‌ಸಿಪಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಮುಂದಾಗಿದ್ದರೂ, ಅದನ್ನು ಸ್ವೀಕರಿಸಲು ಬಿಜೆಪಿ ನಿರಾಕರಿಸಿತ್ತು.

ಸರ್ಕಾರದಲ್ಲಿ 2:1 ಫಾರ್ಮೂಲಾ ಪ್ರಾತಿನಿಧ್ಯ ನೀಡಬೇಕು ಹಾಗೂ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನಮಗೇ ನೀಡಬೇಕೆಂಬುದು ಶಿವಸೇನೆಯ ಷರತ್ತು ಆಗಿದೆ. ಈ ಷರತ್ತನ್ನು ಸ್ವೀಕರಿಸಿ ಬಿಜೆಪಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ?  ಕಾದು ನೋಡಬೇಕಾಗಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.