ಪ್ರಧಾನ ಸುದ್ದಿ

ಕೂಗಿ ಮಾರೋದಕ್ಕೂ ಬೇಕಿಲ್ಲಿ ಪರ್ಮಿಟ್!

ಕೂಗಿ ಮಾರೋದಕ್ಕೂ ಬೇಕಿಲ್ಲಿ ಪರ್ಮಿಟ್!
Published On :

ಮಂಗಳೂರು: ಪಾತ್ರೆ, ಪಗಡಿ, ಗುಜರಿ ಮಾರಾಟ, ಬಟ್ಟೆ ಸ್ಕೀಂ ಹೆಸರಿನಲ್ಲಿ ಮನೆ ಮನೆ ವ್ಯಾಪರಕ್ಕೆ ಬಂದು ಊರು ಕೊಳ್ಳೆ ಹೊಡೆಯುವವರಿಗೆ ಬುದ್ಧಿ ಕಲಿಸಲು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯ್ತಿ ದಿಟ್ಟಹೆಜ್ಜೆ ಇರಿಸಿದೆ. ಇಂತಹ ವ್ಯಾಪಾರಿಗಳು ಪ್ರವೇಶಿಸಿಬೇಕಾದರೆ ಗ್ರಾಮ ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆ ಪರವಾನಗಿ ಹೊಂದಿರುವುದು ಕಡ್ಡಾಯ.

ಸೆ.9ರಂದು ಈ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಂದರಿ ಅಧ್ಯಕ್ಷತೆಯ ಸಾಮಾನ್ಯ ಸಭೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ ಕೂಡ. ಇದೇ ಪಂಚಾಯ್ತಿ ಬೀದಿಬದಿ ವ್ಯಾಪಾರಸ್ಥರಿಗೆ ಈಗಾಗಲೇ ಪರವಾನಗಿ ಕಡ್ಡಾಯಗೊಳಿಸಿದೆ.

ಗ್ರಾಮಗಳಿಗೆ ತೆರಳಿ ಬೇಕಾಬಿಟ್ಟಿ ವ್ಯಾಪಾರ ನಡೆಸುವುದನ್ನು ತಡೆಗಟ್ಟಲು, ಪರ ಊರಿನವರ ಬಗ್ಗೆ ಮುಂಜಾಗ್ರತೆ ವಹಿಸಲು ಮನೆಮನೆ ವ್ಯಾಪಾರಕ್ಕೆ ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಕಳ್ಳತನ ಮುಂತಾದ ಅನಪೇಕ್ಷಿತ ಘಟನೆ ಬಗ್ಗೆ ನಿಗಾ ಇರಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲೇ ಇದೊಂದು ಮಾದರಿ ಕಾರ್ಯಕ್ರಮ.
- ಗೀತಾ, ಪಿಡಿಒ ಒಳಮೊಗ್ರು ಗ್ರಾ.ಪಂ.
ವ್ಯಾಪರದ ಹೆಸರಿನಲ್ಲಿ ಗ್ರಾಮಕ್ಕೆ ಆಗಮಿಸುವ ಅಪರಿಚಿತರು ಹಗಲು ಮನೆಗಳನ್ನು ಗುರುತಿಸಿ ರಾತ್ರಿ ಕಳ್ಳತನ, ದರೋಡೆ, ಕೊಲೆ ಕೃತ್ಯ ನಡೆಸಿದ ಪ್ರಕರಣ ಅನೇಕ ಬಾರಿ ವರದಿಯಾಗಿದೆ. ವ್ಯಾಪಾರಕ್ಕೆ ಬರುವವರ ಬಗ್ಗೆ ಮಾಹಿತಿಗಾಗಿ ಈ ಹೊಸ ವ್ಯವಸ್ಥೆ.
- ದುರ್ಗಾಪ್ರಸಾದ್ ಕುಂಬ್ರ, ಗ್ರಾ.ಪಂ. ಸದಸ್ಯ

ಕ್ರಮ ಹೇಗೆ?
* ಮನೆಗಳಿಗೆ ವಸ್ತುಗಳ ಮಾರಾಟಕ್ಕೆ ಬರುವವರು ಮೊದಲು ಗ್ರಾ.ಪಂ.ಗೆ ತೆರಳಿ ಅರ್ಜಿ ಸಲ್ಲಿಸಬೇಕು.
* ಮಾರಾಟ ಮಾಡುವ ವಸ್ತುವಿನ ವಿವರ, ಮಾರಾಟಗಾರನ ವಿಳಾಸ, ಭಾವಚಿತ್ರ ಕಡ್ಡಾಯ
ಅರ್ಜಿ ಪರಿಶೀಲಿಸಿ ಸಮರ್ಪಕ ಎನಿಸಿದರೆ ಮಾತ್ರ ಸಾಂಕೇತಿಕ ಶುಲ್ಕ ವಿಧಿಸಿ ತಾತ್ಕಾಲಿಕ ಪರವಾನಗಿ
* ಅರ್ಜಿಯೊಂದಿಗೆ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಬೇಕು ನಿರಾಕ್ಷೇಪಣ ಪತ್ರ ಪಡೆಯಬೇಕು
* ಈ ಪ್ರಕ್ರಿಯೆ ಮುಗಿದ ಮೇಲೆ ಗ್ರಾಮಕ್ಕೆ ಪ್ರವೇಶ
ಯಾರಿಗೆಲ್ಲ ಪರವಾನಗಿ?
* ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವುದು ಸಾಮಾನ್ಯ. ಹೀಗೆ ಮಾರಾಟ ಮಾಡುವವರು ಹೆಚ್ಚಿನ ಮಂದಿ ಹೊರ ಜಿಲ್ಲೆ ಅಥವಾ ರಾಜ್ಯದವರಾಗಿರುತ್ತಾರೆ.
* ಬಡ್ಡಿ ಸ್ಕೀಂ, ಚಿನ್ನ ಕರಗಿಸುವುದು, ಸೀರೆ ಜರಿ ಹಾಕುವುದು, ಬಟ್ಟೆ, ಮಡಕೆ, ಬುಟ್ಟಿ, ಕಂಬಳಿ, ಪ್ಲಾಸ್ಟಿಕ್ ಪಾತ್ರೆ, ಹೆಲ್ಮೆಟ್ ಮಾರಾಟ ಮಾಡುವವರು, ಗುಜರಿ ವಸ್ತುಗಳನ್ನು ಕೊಳ್ಳುವವರಿಗೆ


- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.