ಪ್ರಧಾನ ಸುದ್ದಿ

ರಕ್ತ ಕೋಡಿಗೆ ಉಗ್ರ ಸ್ಕೆಚ್

ರಕ್ತ ಕೋಡಿಗೆ ಉಗ್ರ ಸ್ಕೆಚ್
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದಕ್ಷಿಣ ಭಾರತದಲ್ಲಿ ರಕ್ತಪಾತ ಹರಿಸುವ ಉದ್ದೇಶದಿಂದ ಪಾಕ್ ಐಎಸ್‌ಐ 30ಕ್ಕೂ ಅಧಿಕ ಉಗ್ರ ಘಟಕಗಳನ್ನು ರಚಿಸಿದೆ. ಇವರ ನೆರವಿನಿಂದ ದಕ್ಷಿಣ ಭಾರತದಲ್ಲಿ 26/11 ಮಾದರಿಯ ದಾಳಿ ನಡೆಸುವ ಭಾರಿ ಸಂಚು ರೂಪಿಸಲಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಎನ್‌ಐಎಯಿಂದ ಬಂಧಿತನಾದ ಲಂಕಾ ಪ್ರಜೆ ಅರುಣ್ ಸೆಲ್ವರಾಜನ್ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮುಂಬೈ ದಾಳಿಯ ನಂತರ ದಕ್ಷಿಣ ಭಾರತದ ಮೇಲೆ ಕಣ್ಣು ಹಾಕಿರುವ ಐಎಸ್‌ಐ, ಇಲ್ಲಿ ದಾಳಿ ನಡೆಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಇಸ್ರೇಲ್ ಮತ್ತು ಅಮೆರಿಕ ರಾಯಭಾರ ಕಚೇರಿಗಳ ಮಾಹಿತಿಗಳನ್ನು ಐಎಸ್‌ಐಗೆ ರವಾನಿಸುತ್ತಿದ್ದ ಲಂಕಾ ಪ್ರಜೆ ಭಾರತೀಯ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿಬಿದ್ದಿದ್ದ. ಈಗ ಅಂತಹುದೇ ಕೆಲಸ ಮಾಡುತ್ತಿದ್ದ ಸೆಲ್ವರಾಜನ್ ಎನ್‌ಐಎ ದಕ್ಷಿಣ ಭಾರತದ ಮೇಲೆ ದಾಳಿಗೆ ಭಾರಿ ಸಂಚು ನಡೆದಿರುವುದು ಸ್ಪಷ್ಟವಾಗಿದೆ.

ಇಸ್ರೇಲ್ ನಾಗರಿಕರ ಒತ್ತೆಸೆರೆ ತಂತ್ರ
ಭಾರತ ಮತ್ತು ಇಸ್ರೇಲ್ ಸಂಬಂಧ ಹಾಳು ಮಾಡುವುದೂ ಐಎಸ್‌ಐ ತಂತ್ರವಾಗಿದೆ. ಮುಂಬೈ ಮಾದರಿಯಲ್ಲಿ ಚೆನ್ನೈನಲ್ಲಿ ದಾಳಿ ನಡೆಸಿ ಅಲ್ಲಿರುವ ಇಸ್ರೇಲ್ ನಾಗರಿಕರನ್ನು ಒತ್ತೆಸೆರೆಯಲ್ಲಿಡುವ ಸಂಚನ್ನೂ ಪಾಕಿಸ್ತಾನ ನಡೆಸಿದೆ. ಇದಕ್ಕಾಗಿ ಐಎಸ್‌ಐ 30ಕ್ಕೂ ಅಧಿಕ ಘಟಕಗಳನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದೆ ಎಂದು ಬಂಧಿತ ಸೆಲ್ವರಾಜನ್ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಲಂಕಾಗೆ ಕರೆದೊಯ್ಯಲು ನಿರ್ಧಾರ

ಸೆಲ್ವರಾಜನ್ ಮತ್ತು ಶಾಕೀರ್ ಹುಸೇನ್ ದಕ್ಷಿಣ ಭಾರತದಲ್ಲಿನ ಸೇನಾ ಕಟ್ಟಡಗಳ ಫೋಟೋಗಳನ್ನು ತೆಗೆದು ಕೊಲಂಬೋದಲ್ಲಿರುವ ಪಾಕ್ ರಾಯಭಾರ ಕಚೇರಿಗೆ ಕಳುಹಿಸಿಕೊಡುತ್ತಿದ್ದರು. ರಕ್ಷಣಾ ಇಲಾಖೆಯ ಅಧಿಕಾರಿಗಳ ಫೋಟೋಗಳನ್ನೂ ಸೆಲ್ವರಾಜನ್ ಕಳುಹಿಸಿಕೊಟ್ಟಿದ್ದಾನೆ ಎಂಬ ಅಂಶವೂ ಬಹಿರಂಗವಾಗಿದೆ. ಇವರಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದಕ್ಕಾಗಿ ಅವರನ್ನು ಲಂಕಾಗೆ ಕರೆದೊಯ್ಯಲು ಎನ್‌ಐಎ ನಿರ್ಧರಿಸಿದೆ.

ಮೊದಲ ಆತ್ಮಾಹುತಿ ಬಾಂಬರ್?
ಇರಾಕ್ ಮತ್ತು ಸಿರಿಯಾದಲ್ಲಿ ಪ್ರಬಲವಾಗಿರುವ ಇಸಿಸ್ ಸಂಘಟನೆಗಾಗಿ ಚೆನ್ನೈ ಮೂಲದ ಯುವಕನೊಬ್ಬ ಆತ್ಮಾಹುತಿ ಮಾಡಿಕೊಳ್ಳಲಿದ್ದಾನೆ. ಇಂತಹುದೊಂದು ಆಂತಕಕಾರಿ ವಿಚಾರ ಈಗ ಬಹಿರಂಗವಾಗಿದ್ದು, ಭಾರತೀಯ ಭದ್ರತಾ ಸಂಸ್ಥೆಗಳು ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.