ಸ್ಯಾಂಡಲ್ವುಡ್ಗೆ ಎಚ್ಡಿಕೆ ಪುತ್ರ ನಿಖಿಲ್ ಎಂಟ್ರಿ

ಬೆಂಗಳೂರು: ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಹೀರೋ ಆಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
ಹೌದು, ಈ ಕುರಿತು ಸ್ವತಃ ಕುಮಾರಸ್ವಾಮಿಯವರೇ ಸ್ಪಷ್ಟನೆ ನೀಡಿದ್ದು, ತಮ್ಮ ಪುತ್ರ ನಿಖಿಲ್ಗೌಡನನ್ನು ಹೀರೋ ಮಾಡುತ್ತಿರುವುದು ನಿಜ, ಮಗನನ್ನು ಹೀರೋ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಈ ಬಗ್ಗೆ ಕಳೆದ ಐದು ವರ್ಷಗಳಿಂದ ನಿಖಿಲ್ಗೆ ಹೇಳುತ್ತಿದ್ದೆ. ಆದರೆ ಆತನಿಗೆ ಈಗ ಸಿನಿಮಾದಲ್ಲಿ ನಟಿಸುವ ಆಸಕ್ತಿ ಬಂದಿದೆ ಎಂದು ಹೇಳಿದ್ದಾರೆ.
ಮಗನನ್ನು ಹೀರೋ ಮಾಡಲು ನಿರ್ಧರಿಸಿರುವ ಕುಮಾರಸ್ವಾಮಿ ಅವರು, ಈ ಸಂಬಂಧ ತೆಲುಗು ಮತ್ತು ಹಿಂದಿ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದಾರೆ. ಅಲ್ಲದೆ ಕೆ.ಮಾದೇಶ ನಿರ್ದೇಶನದಲ್ಲಿ ತಮ್ಮದೇ ಆದ 'ಚೆನ್ನಾಂಬಿಕ ಫಿಲಂಸ್' ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಜನವರಿ 22ರಂದು ನಿಖಿಲ್ 26ನೇ ಹುಟ್ಟು ಹಬ್ಬ. ಅಂದೇ ಚಿತ್ರ ಮುಹೂರ್ತ ನೆರವೇರಿಸಲಾಗುವುದು ಮತ್ತು ನಿಖಿಲ್ಗೆ ನಟನೆ, ಫೈಟಿಂಗ್, ಡ್ಯಾನ್ಸಿಂಗ್ ಕುರಿತು ತರಬೇತಿ ನೀಡಲಾಗುವುದು ಎಂದು ಸಹ ಎಚ್ಡಿಕೆ ತಿಳಿಸಿದ್ದಾರೆ.
ನಿಖಿಲ್ಗೆ ಸೂಕ್ತ ನಾಯಕಿಯ ಹುಟುಕಾಟ ಆರಂಭವಾಗಿದ್ದು, ಚಿತ್ರದ ಟೈಟಲ್ ಇನ್ನೂ ಅಂತಿಮವಾಗಿಲ್ಲ. ಆದರೆ ಮೂಲಗಳ ಪ್ರಕಾರ, ತೆಲುಗಿನ ಸೂಪರ್ ಹಿಟ್ ಚಿತ್ರವೊಂದರ ರಿಮೇಕ್ ಮಾಡಲು ನಿರ್ಧರಿಸಲಾಗಿದ್ದು, ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಸ್ಥಾನದಲ್ಲಿರುವ ಮಹೇಶ್ ಬಾಬು, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ತೇಜ್ ಹಾಗೂ ಪ್ರಭಾಸ್ ನಟಿಸಿರುವ ಚಿತ್ರಗಳ ರಿಮೇಕ್ ಹಕ್ಕು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


