ನ್ಯೂಯಾರ್ಕ್: 9/11 ಸ್ಮಾರಕಕ್ಕೆ ಮೋದಿ ಭೇಟಿ; ಗೌರವಾರ್ಪಣೆ

ನ್ಯೂಯಾರ್ಕ್: ಐದು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭಯೋತ್ಪಾದಕ ದಾಳಿಗೆ ತುತ್ತಾದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಸ್ಮಾರಕಕ್ಕೆ ಭೇಟಿ ನೀಡಿದರು.
2001ರ ಸೆಪ್ಟೆಂಬರ್ 11ರಂದು ಭಯೋತ್ಪಾದಕರು ವಿಮಾನಗಳನ್ನು ಹೈಜಾಕ್ ಮಾಡಿ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳಿಗೆ ನುಗ್ಗಿಸಿ ದ್ವಂಸ ಮಾಡಿದ್ದರು. ಅದರ ನೆನಪಿನಾರ್ಥವಾಗಿ ನಿರ್ಮಿಸಿರುವ 9/11 ಸ್ಮಾರಕಕ್ಕೆ ಭೇಟಿ ನೀಡಿ ಮೋದಿ ಗೌರವ ಸಲ್ಲಿಸಿದರು.
ಬಿಳಿ ತೋಳಿನ ಕುರ್ತಾ ಧರಿಸಿ ತನ್ನ ಎಡ ಭುಜದ ಮೇಲೆ ಬೂದು ಬಣ್ಣದ ಶಾಲು ಒದ್ದು ಆಗಮಿಸಿದ ಮೋದಿ, ಕಂದು ಬಣ್ಣದ ಗ್ರಾನೈಟ್ನಿಂದ ನಿರ್ಮಿಸಲಾಗಿರುವ ಸ್ಮಾರಕದ ಮುಂದೆ ಕೆಲ ಕಾಲ ಕೈಕಟ್ಟಿ ನಿಂತು ಮೌನವಾಗಿ ನಮಿಸಿದರು. ಭಾರತ ಸೇರಿದಂತೆ ಅಮೆರಿಕದ 3 ಸಾವಿರಾರು ಮಂದಿ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದರು. ಅವರ ನೆನಪಿಗಾಗಿ ಸ್ಮಾರಕದ ಮೇಲೆ ಬಲಿಯಾದವರ ಹೆಸರುಗಳನ್ನು ಕೆತ್ತಲಾಗಿದ್ದು, ಸ್ಮಾರಕದ ಮೇಲೆ ಒಂದೊಂದರಂತೆ ಹಳದಿ ಬಣ್ಣದ ಹೂಗಳನ್ನು ಇಟ್ಟು ಮಡಿದವರಿಗೆ ಮೋದಿ ಗೌರವ ಸಲ್ಲಿಸಿದರು.
9/11 ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿರುವುದು ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತದ ದೃಢ ಸಂಕಲ್ಪದ ಸಾಂಕೇತವೆಂದು ಕಾಣಬಹುದಾಗಿದೆ.
ಅಮೆರಿಕ ತಲುಪಿದ್ದ ಮೋದಿ, ನಿನ್ನೆ ನ್ಯೂಯಾರ್ಕ್ ಸಿಟಿ ಮೇಯರ್ ಬಿಲ್ ಡಿ ಬ್ಲೇಸಿಯೊ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಹಾ ನಗರಗಳಲ್ಲಿ ಜನವಸತಿ, ಜನಸಂದಣಿ, ಕಾನೂನು ಸುವ್ಯವಸ್ಥೆ, ಭಯೋತ್ಪಾದನಾ ಬೆದರಿಕೆಯಂತಹ ಸಮಸ್ಯೆಗಳ ನಿರ್ವಹಣೆ ಕುರಿತು ಬ್ಲೇಸಿಯೊ ಅವರ ಜೊತೆ ಚರ್ಚಿಸಿದರು.
ನಂತರ ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ಕ್ಯಾನ್ಸರ್ ತಜ್ಞ ಪ್ರೊಫೆಸರ್ ಹರಾಲ್ಡ್ ವಾರ್ಮಸ್ ಅವರನ್ನು ಮೋದಿ ಭೇಟಿ ಮಾಡಿದರು.
Modi pays tribute at 9/11 Memorial - Watch Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


