ಪ್ರಧಾನ ಸುದ್ದಿ

ನವರಾತ್ರಿ ಸಂಭ್ರಮದಿಂದ ಮರಳುತ್ತಿದ್ದಾಗ ಅಪಘಾತ: 10 ಸಾವು

ನವರಾತ್ರಿ ಸಂಭ್ರಮದಿಂದ ಮರಳುತ್ತಿದ್ದಾಗ ಅಪಘಾತ: 10 ಸಾವು
Published On :

ಖಾಂಡ್ವಾ: ಇಂದೋರ್- ಇಚ್ಛಾಪುರ್ ಹೈವೇಯಲ್ಲಿ ಟ್ರಕ್ ಬೆಳ್ಳಂಬೆಳಗ್ಗೆ 3.4ಕ್ಕೆ ಸಂಭವಿಸಿದ ಅಪಘಾತದಲ್ಲಿ 10 ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ವರದಿಯಾಗಿದೆ.

ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಜನರು ಸಂಚರಿಸುತ್ತಿದ್ದ ವಾಹನಕ್ಕೆ ಟ್ರಕ್ ಢಿಕ್ಕಿ ಹೊಡೆದು  15 ಜನರಿಗೆ ಗಾಯಗಳಾಗಿದೆ. ಸಾವಿಗೀಡಾದವರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಕೂಡಾ ಇದ್ದಾರೆ ಎಂದು ಹೇಳಲಾಗುತ್ತಿದೆ.

ಗಾರ್ಭಾ ಮುಗಿಸಿ ಉಜ್ಜೈನ್ ನಿಂದ ಹೈದ್ರಾಬಾದ್‌ಗೆ ಬರುತ್ತಿದ್ದ ವೇಳೆ ಜನರನ್ನು ಕರೆತರುತ್ತಿದ್ದ ವಾಹನ ಪಿಕ್ ಅಪ್ ಟ್ರಕ್‌ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಶರ್ಮಾ ಹೇಳಿದ್ದಾರೆ.

ಸಾವಿಗೀಡಾದ  ವ್ಯಕ್ತಿಗಳು ಖಾರ್ಗೋನ್ ಜಿಲ್ಲೆಯ ಕೇಡ್ಲಾ ಜಾಗಿರ್ ಗ್ರಾಮದವರಾಗಿದ್ದು, ಗಾಯಾಳುಗಳನ್ನು ಖಾಂಡ್ವಾ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.