ಪ್ರಧಾನ ಸುದ್ದಿ

ಜಯಾ ಜೈಲು: ತಮಿಳು ನಟರಿಂದ ಉಪವಾಸ

ಜಯಾ ಜೈಲು: ತಮಿಳು ನಟರಿಂದ ಉಪವಾಸ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಅಕ್ರಮ ಆಸ್ತಿ ಸಂಪಾದನೆಯ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿರುವ ತಮಿಳ್ನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಬೆಂಬಲ ನೀಡಿ ತಮಿಳು ಸಿನಿಮಾ ರಂಗದ ನಟ/ ನಟಿಯರು ಇನ್ನಿತರ ಕಾರ್ಯಕರ್ತರು ಮಂಗಳವಾರ ಉಪವಾಸ ಆರಂಭಿಸಿದ್ದಾರೆ. ಇಂದು ತಮಿಳ್ನಾಡಿನಲ್ಲಿ ಥಿಯೇಟರ್‌ಗಳು ಬಂದ್ ಆಗಿವೆ. ಅದೇ ವೇಳೆ ಸಿನಿಮಾ, ಸೀರಿಯಲ್ ಶೂಟಿಂಗ್ ಕೂಡಾ ಸ್ಥಗಿತಗೊಳಿಸಲಾಗಿದೆ.

ಸಿನಿಮಾರಂಗದವರ 9 ಸಂಘಟನೆಗಳ ಸಂಯುಕ್ತ ಕಾರ್ಯಕಾರೀ ಸಮಿತಿ ನೇತೃತ್ವದಲ್ಲಿ ಈ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಚೆಪಾಕ್‌ನಲ್ಲಿರುವ ಸರ್ಕಾರಿ ಅತಿಥಿ ಭವನದ ಹೊರಗೆ ತಮಿಳು ಚಿತ್ರ ನಟ ನಟಿಯರು ಉಪವಾಸ ಕುಳಿತಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಸತ್ಯಾಗ್ರಹ ಮುಂದುವರಿಯಲಿದೆ.  ಖ್ಯಾತ ನಟರಾದ ಕಮಲಾಹಾಸನ್, ಸೂರ್ಯ, ವಿಜಯ್ , ವಿಶಾಲ್, ಕಾರ್ತಿ, ಶರತ್ ಕುಮಾರ್, ಶ್ರೀಕಾಂತ್ ಮೊದಲಾದವರು ಈ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದು, ಅನಾರೋಗ್ಯ ಕಾರಣ ರಜನೀಕಾಂತ್ ಭಾಗಿಯಾಗಿಲ್ಲ.

ಉಪವಾಸದ ಹಿನ್ನೆಲೆಯಲ್ಲಿ ಥಿಯೇಟರ್‌ಗಳು ಸಂಜೆ 6 ಗಂಟೆಯ ನಂತರವೇ ತೆರೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.