ಹಲ್ಲೆ ಮಾಡಿದ್ದೇ ರಾಜ್‌ದೀಪ್!

ನವದೆಹಲಿ: ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಮೋದಿ ಅಭಿಮಾನಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತ ರಾಜ್‌ದೀಪ್ ಸರ್ ದೇಸಾಯಿ ಸುಳ್ಳೇಸುಳ್ಳು ಹುಯಿಲೆಬ್ಬಿಸುತ್ತಿದ್ದಾರೆ. ಅಂದು ಹಲ್ಲೆ ಮಾಡಿದ್ದು ಅಭಿಮಾನಿಗಳಲ್ಲ ಬದಲಾಗಿ ಸ್ವತಃ ಸರ್‌ದೇಸಾ. ಅಂತೆ!
ಹೀಗಂತ ಸ್ವತಃ ಹಲ್ಲೆಗೊಳಗಾಗ ಮಹೇಂದರ್ ಅವರೇ ಟ್ವೀಟ್ ಮಾಡಿದ್ದಾರೆ. ನಾನೇನು ಹಲ್ಲೆ ಮಾಡಿಲ್ಲ, ಬದಲಾಗಿ ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದು. ತಮ್ಮ ಮೇಲೆಯೇ ಹಲ್ಲೆಯಾಗಿದೆ ಎಂದು ಬಿಂಬಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಬಹುದು. ಆದರೆ ನಾನು ಸತ್ಯ ಮುಚ್ಚಿಹೋಗಲು ಬಿಡಲ್ಲ ಎಂದಿದ್ದಾರೆ. ಇಂಡಿಯಾ ಟುಡೆಯ ವೆಬ್‌ಸೈಟ್‌ನಲ್ಲಿ ಸರ್‌ದೇಸಾಯಿ ಸಮರ್ಥನೆಗೆ ಬೇಕಾದ ವಿಡಿಯೋ ತುಣುಕನ್ನಷ್ಟೇ ಹಾಕಲಾಗಿದೆ ಎಂದು ಮಹೇಂದರ್ ಹೇಳಿಕೊಂಡಿದ್ದಾರೆ.
ಮಹೇಂದರ್ ಹೇಳಿದ್ದಿಷ್ಟು: ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಟಿಕೆಟ್‌ಗಾಗಿ ಸಾಲಲ್ಲಿ ನಿಂತಿದ್ದಾಗ ಕೆಲವು ಯುವ ಭಾರತೀಯರಿಗೆ ಮೋದಿ ಅವರು ನಿಮಗೆ ಈ ರೀತಿ ಮಾಡಲು ಕಲಿಸಿಕೊಟ್ಟರೇ? ಎಂದು ರಾಜ್ ದೀಪ್ ಟಾಂಟ್ ನೀಡುತ್ತಿರುವುದು ಕಣ್ಣಿಗೆ ಬಿತ್ತು. ಸಾರ್ವಜನಿಕರಿಂದ ಅವರಿಗೆ ಬೇಕಿದ್ದ ಉತ್ತರ ಸಿಗದಿದ್ದಾಗ ಮಾಧ್ಯಮವು ಮೋದಿ ಅವರ ಪಾಲಿಗೆ ಪಕ್ಷಪಾತಿಯಾಗಿತ್ತು ಎಂದು ಹೇಳಲು ಹೊರಟಿದ್ದೀರಾ? ಎಂದು ರಾಜ್ ದೀಪ್ ಪ್ರಶ್ನಿಸುತ್ತಿದ್ದರು. ಆಗ ನಾನು ತಕ್ಷಣ ನಿಮ್ಮಂಥ ಸುದ್ದಿಯ ವ್ಯಾಪಾರಿಗಳು ಮೋದಿ ವಿಚಾರದಲ್ಲಿ ಪಕ್ಷಪಾತಿಯಾಗಿದ್ದೀರಿ. ನೀವೊಬ್ಬ ನಂ.1 ಸುದ್ದಿ ವ್ಯಾಪಾರಿ ಎಂದು ಪ್ರತ್ಯುತ್ತರ ನೀಡಿದೆ. ಇದರಿಂದ ಆಕ್ರೋಶಗೊಂಡು ಅವಹೇಳನಕಾರಿ ಭಾಷೆಯಲ್ಲಿ ಜರಿದ ಅವರು, ಅಂಗಿಯ ಕಾಲರ್ ಹಿಡಿದು ಎಳೆದಾಡಿದರು. ಆಗ ನಾನು ಅನಿವಾರ್ಯವಾಗಿ ಅವರನ್ನು ತಳ್ಳಬೇಕಾಯಿತು.
ರಾಜ್‌ದೀಪ್ ರನ್ನು ಬೆಂಬಲಿಸುವ ಪತ್ರಕರ್ತರನ್ನೂ ಮಹೇಂದರ್ ಪ್ರಶ್ನಿಸಿದ್ದಾರೆ. ಪತ್ರಕರ್ತರಿಗೆ ನನ್ನದೊಂದು ಪ್ರಶ್ನೆ. ರಾಜತಾಂತ್ರಿಕವಾಗಿ ಮಹತ್ವದ ಪ್ರವಾಸದಲ್ಲಿರುವ ಭಾರತದ ಪ್ರಧಾನಿಯೊಬ್ಬರನ್ನು ವಿದೇಶದಲ್ಲಿ ದುರುದ್ದೇಶಪೂರ್ವಕವಾಗಿ ಅವಹೇಳನ ಮಾಡುವುದು ಸರಿಯೇ? ಪ್ರಧಾನಿ ಅವರ ಜತೆಗಿನ ವೈಯಕ್ತಿಕ ಹೋರಾಟವನ್ನು ವಿದೇಶಿ ನೆಲಕ್ಕೂ ಕೊಂಡೊಯ್ಯುವುದು ದೇಶಕ್ಕೆ ಅವಮಾನ ಮಾಡಿದಂತಾಗುವುದಿಲ್ಲವೇ? ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


