

ಬೆಂಗಳೂರು: ಮೊದಲು ನಿಮ್ಮ ನಾಯಕ ಎಲ್ಲಿದ್ದಾರೆಂದು ಹುಡುಕಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಪ್ರತಿಪಕ್ಷಗಳು ಹತಾಶೆಗೊಂಡಿವೆ. ನಿರಾಶೆಯಲ್ಲಿವೆ ಎಂದರು. ಅಲ್ಲದೆ ಬಿಜೆಪಿಯ ತಪ್ಪುಗಳನ್ನು ಹುಡುಕುವ ಬದಲು ನಿಮ್ಮ ನಾಯಕನನ್ನು ಹುಡುಕಿ ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.
ಇದೇ ವೇಳೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಪಕ್ಷಕ್ಕೆ ತೃಪ್ತಿ ತಂದಿದೆ ಎಂದ ಶಾ, 10 ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಿದೆ ಎಂದರು.
ರಾಹುಲ್ ಗಾಂಧಿ ವಾಪಸ್ ಬಂದಾಗ ನಿಮಗೆ ತಿಳಿಯುತ್ತದೆ. ಅಲ್ಲಿಯವರೆಗೆ ಸುಮ್ಮನಿರಿ ಎಂದು ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಮಧ್ಯೆ, ಕಳೆದ ಆರು ವಾರಗಳಿಂದ ನಾಪತ್ತೆಯಾಗಿರುವ ರಾಹುಲ್ ಗಾಂಧಿ ಏಪ್ರಿಲ್ 12ರಂದು ದೆಹಲಿಗೆ ವಾಪಸ್ ಆಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.