ಪಕ್ಷದ ನಾಯಕತ್ವದ ಬಗ್ಗೆ ತುಟಿ ಬಿಚ್ಚದಂತೆ ಸದಸ್ಯರಿಗೆ ಕಾಂಗ್ರೆಸ್ ತಾಕೀತು

ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವುದನ್ನು ವಿರೋಧಿಸುತ್ತಿರುವ ಕೆಲವು ನಾಯಕರಿಗೆ ಕಾಂಗ್ರೆಸ್ ಪಕ್ಷ ಸೋಮವಾರ
ಕಾಂಗ್ರೆಸ್ ನಾಯಕರ ಸಭೆ
ಕಾಂಗ್ರೆಸ್ ನಾಯಕರ ಸಭೆ
Updated on: 

ನವದೆಹಲಿ: ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವುದನ್ನು ವಿರೋಧಿಸುತ್ತಿರುವ ಕೆಲವು ನಾಯಕರಿಗೆ ಕಾಂಗ್ರೆಸ್ ಪಕ್ಷ ಸೋಮವಾರ ಎಚ್ಚರಿಕೆ ನೀಡಿ ಪಕ್ಷದ ನಾಯಕತ್ವದ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ತುಟಿ ಬಿಚ್ಚದಂತೆ ಸೂಚನೆ ನೀಡಿದೆ.

"ಬದಲಾವಣೆ ಜೀವನದ ನಿಯಮ.... ಹಾಗೆಯೆ ಸಂಸ್ಥೆ ಕೂಡ ಬದಲಾಗುತ್ತದೆ ಹಾಗು ಕ್ರಮವಾಗಿ ಬೆಳವಣಿಗೆಯಾಗುತ್ತದೆ... ಯಾರಿಗಾದರೂ ತಮ್ಮ ಅಭಿಪ್ರಾಯ ಅಥವಾ ಹೊಳಹನ್ನು ಸೂಚಿಸುವುದಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕು" ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಜೋಯ್ ಕುಮಾರ್ ವರದಿಗಾರಿಗೆ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಮತ್ತು ಪಕ್ಷದ ಕಾರ್ಯಕಾರಿಣಿ ಸಮಿತಿಯ ಸೂಚನೆಯಂತೆ ಬದಲಾವಣೆಗಳಾಗುತ್ತವೆ. ಪಕ್ಷದ ಸಂವಿಧಾನದಂತೆ ಸರಿಯಾದ ಕಾರ್ಯಸೂಚಿಯೊಡನೆ ಇದು ನಡೆಯುತ್ತದೆ ಎಂದಿದ್ದಾರೆ ಅವರು.

"ಸೋನಿಯಾ ಮತ್ತು ರಾಹುಲ್ ಇಬ್ಬರೂ ನಮ್ಮ ನಾಯಕರು. ಕಷ್ಟದ ಸನ್ನಿವೇಶದಲ್ಲಿ ಇಬ್ಬರೂ ಪಕ್ಷವನ್ನು ಮುನ್ನಡೆಸಿದ್ದಾರೆ. ಯಾವುದೇ ಸಂಸ್ಥೆಯಲ್ಲಾದರು ಬದಲಾವಣೆ ಸಹಜ. ಆ ಬದಲಾವಣೆಗಳು ಬಂದಾಗ ಸೋನಿಯಾ ಗಾಂಧಿ ಅವರ ನಾಯಕತ್ವದಡಿ ಹಾಗೂ ಕಾರ್ಯಕಾರಿಣಿ ಸಮಿತಿಯ ಸಲಹೆಗಳೊಂದಿಗೆ ಜರುಗಲಿದೆ" ಎಂದು ಅವರು ತಿಳಿಸಿದ್ದಾರೆ.

ಸೋನಿಯಾ ರಾಹುಲ್ ಮಧ್ಯೆ ಪಕ್ಷ ಇಬ್ಭಾಗ

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಅಮರಿಂದರ್ ಸಿಂಗ್, ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಹಾಗು ಪಕ್ಷದ ವಕ್ತಾರ ಸಂದೀಪ್ ದೀಕ್ಷಿತ್ ಸೋನಿಯಾ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗು ಮುಂದುವರೆಯಬೇಕೆಂದು ಆಗ್ರಹಿಸಿದ್ದಾರೆ.

ಸೋನಿಯಾ ಗಾಂಧಿ ಅವರು ಕಳೆದ ೧೭ ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿ ದಾಖಲೆ ಮಾಡಿದ್ದರೆ.

ಈ ನಡುವೆ ರಾಜಕೀಯದಿಂದ ಬಿಡುವು ತೆಗೆದುಕೊಂಡಿರುವ ರಾಹುಲ್ ಗಾಂಧಿ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಭುಸ್ವಾಧೀನ ಕಾಯ್ದೆಯ ವಿರುದ್ಧ ರೈತರ ರ್ಯಾಲಿ ಉದ್ದೇಶಿಸಿ ಮಾತನಾಡಲು ಏಪ್ರಿಲ್ ೧೯ರಂದು ಬರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com