೪೨ ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಕೆನಡಾ ಭೇಟಿ

ಇಂಧನ, ನಾಗರಿಕ ಅಣು ಒಪ್ಪಂದ ಹಾಗು ಭಾರತೀಯ ಅಭಿವೃದ್ಧಿಗೆ ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಸೆಳೆಯುವತ್ತ ದ್ವಿಪಕ್ಷೀಯ ಸಂಬಂಧಗಳ
ಜರ್ಮನಿಯಲ್ಲಿ ಮಾತನಾಡಿದ ಮೋದಿ
ಜರ್ಮನಿಯಲ್ಲಿ ಮಾತನಾಡಿದ ಮೋದಿ
Updated on: 

ಒಟ್ಟಾವಾ: ಇಂಧನ, ನಾಗರಿಕ ಅಣು ಒಪ್ಪಂದ ಹಾಗು ಭಾರತೀಯ ಅಭಿವೃದ್ಧಿಗೆ ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಸೆಳೆಯುವತ್ತ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ೪೨ ವರ್ಷಗಳ ನಂತರ ಭಾರತೀಯ ಪ್ರಧಾನಿ ಒಬ್ಬರು ಭೇಟಿ ನೀಡುತ್ತಿದಾರೆ ಎಂದೇ ಬಣ್ಣಿಸಲಾದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾಗೆ ಬಂದಿಳಿದಿದ್ದಾರೆ.

ಕೆನಡಾದಲ್ಲಿ ಭಾರತೀಯ ರಾಯಭಾರಿ ವಿಷ್ಣು ಪ್ರಕಾಶ್ ಅವರು ಸ್ವಾಗತಿಸಿದ್ದಾರೆ. ಮೋದಿ ಅವರು ಕೆನಡಾದ ರಧಾನಿ ಸ್ಟೀಫನ್ ಹಾರ್ಪರ್ ಅವರನ್ನು ಭೇಟಿ ಮಾಡಲಿದ್ದಾರೆ. ಈಗಷ್ಟೇ ಜರ್ಮನಿಯಲ್ಲಿ ತಂತ್ರಜ್ಞಾನ ಮತ್ತು ಭಾರತದಲ್ಲಿ ಹೂಡಿಕೆಗೆ ಕರೆ ಕೊಟ್ಟು ಈಗ ಮೋದಿ ಕೆನಡಾದಲ್ಲಿ ಬಂದಿಳಿದಿದ್ದಾರೆ.

ಭಾರತ ಮತ್ತು ಕೆನಡಾದ ಸಂಬಂಧವನ್ನು ಮುಂದೆ ಕೊಂಡೊಯ್ಯುವುದರ ಬಗ್ಗೆಯೂ ಮೋದಿ ಹಾರ್ಪರ್ ಜೊತೆ ಮಾತುಕತೆ ನಡೆಸಲಿದ್ದಾರೆ. ಅವರು ಕೆನಡಾ ಉದ್ದಿಮೆದಾರರನ್ನು ಭೇಟಿ ಮಾಡಲಿದ್ದಾರೆ. "ನಾವು ಫಲಪ್ರದ ಮಾತುಕತೆಯನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ವಿದೇಶಾಂಗ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅಕ್ಬರುದ್ದೀನ್ ತಿಳಿಸಿದ್ದಾರೆ.

ಮೋದಿ ಅವರು ಟೊರಂಟೋದಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೂರು ದಶಕಗಳ ಹಿಂದೆ ಕನಿಷ್ಕಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲು ಮೋದಿ ಅವರು ಏರ್ ಇಂಡಿಯಾ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ.

ಫ್ರಾನ್ಸ್ ಮತ್ತು ಜರ್ಮನಿಯ ಪ್ರವಾಸದ ನಂತರ ಮೂರು ದೇಶಗಳ ಪ್ರವಾಸ ಪಟ್ಟಿಯಲ್ಲಿ ಕೆನಡಾ ಕೊನೆಯ ದೇಶ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com