ಹೀರೋ ಸೈಕಲ್ಸ್ ಸಂಸ್ಥಾಪಕ ಒ ಪಿ ಮುಂಜಲ್ ನಿಧನ

ಸೈಕಲ್ ಉತ್ಪಾದನಾ ದೈತ್ಯ ಹೀರೋ ಸೈಕಲ್ಸ್ ಸಂಸ್ಥೆಯ ಸಂಸ್ಥಾಪಕ ಒ ಪಿ ಮುಂಜಲ್ ಅವರು ಪಂಜಾಬಿನ ಲುಧಿಯಾನ ನಗರದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ
ಹೀರೋ ಸೈಕಲ್ಸ್ ಸಂಸ್ಥೆಯ ಲೋಗೋ
ಹೀರೋ ಸೈಕಲ್ಸ್ ಸಂಸ್ಥೆಯ ಲೋಗೋ
Updated on: 

ಚಂಡೀಘರ್: ಸೈಕಲ್ ಉತ್ಪಾದನಾ ದೈತ್ಯ ಹೀರೋ ಸೈಕಲ್ಸ್ ಸಂಸ್ಥೆಯ ಸಂಸ್ಥಾಪಕ ಒ ಪಿ ಮುಂಜಲ್ ಅವರು ಪಂಜಾಬಿನ ಲುಧಿಯಾನ ನಗರದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಮುಂಜಲ್ (೮೬) ಅವರನ್ನು ಲುಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಆಲ್ಲೇ ಕೊನೆಯುಸಿರೆಳೆದಿದ್ದಾರೆ.

೧೯೪೪ ರಲ್ಲಿ ಅಮೃತಸರದಲ್ಲಿ ತಮ್ಮ ಸಹೋದರರನ್ನು ಕೂಡಿ ಸಣ್ಣದಾಗಿ ಪ್ರಾರಂಭಿಸಿದ ಉದ್ದಿಮೆ ವಿಶ್ವದ ಅತಿ ದೊಡ್ಡ ಸೈಕಲ್ ಉತ್ಪಾದನಾ ಸಂಸ್ಥೆಯಾಗಿ ಬೆಳೆದು, ಒ ಪಿ ಮುಂಜಲ್ ಅವರು ದೇಶದ ಸೈಕಲ್ ಉದ್ದಿಮೆಯ ಜನಕ ಎಂದೇ ಹೆಸರಾಗಿದ್ದರು.

ಲುಧಿಯಾನದಲ್ಲಿ ಮೊದಲ ಬಾರಿಗೆ ಹೀರೋ ಸೈಕಲ್ ಉತ್ಪಾದನಾ ಕಾರ್ಖಾನೆ ಪ್ರಾರಂಭವಾಗಿ ದಿನಕ್ಕೆ ೨೫ ಸೈಕಲ್ ಗಳ ಉತ್ಪಾದನೆಯಾಗುತ್ತಿತ್ತು. ಈಗ ಅಲ್ಲಿ ದಿನಕ್ಕೆ ೧೯೦೦೦ ಸೈಕಲ್ ಗಳನ್ನು ಉತ್ಪಾದನೆ ಮಾಡಲಾಗುತ್ತದೆ.

೧೯೮೬ ರಲ್ಲಿ ಅತಿ ದೊಡ್ಡ ಸೈಕಲ್ ಉತ್ಪಾದನಾ ಸಂಸ್ಥೆ ಎಂದು ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕ ಸೇರಿದ್ದ ಹೀರೋ, ದೇಶದಲ್ಲಿ ೪೮% ಸೈಕಲ್ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com