

ಬ್ಯಾಂಕಾಕ್: ಬ್ಯಾಂಕಾಕ್ ನ ಇರಾವನ ದೇಗುಲದ ಸಮೀಪ ಸೋಮವಾರ ಸಂಭವಿಸಿದ ಪ್ರಬಲ ಸ್ಪೋಟಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವು ದೃಶ್ಯಾವಳಿಯ ಮೂಲಕ ಶಂಕಿತ ವ್ಯಕ್ತಿಯೊಬ್ಬನನ್ನು ಗುರ್ತಿಸಲಾಗಿದ್ದು, ಆತನಿಗಾಗಿ ಅಧಿಕಾರಿಗಳು ಮಂಗಳವಾರ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೋಟ ಸಂಭವಿಸಿದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಅಲ್ಲಿನ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ದೃಶ್ಯಾವಳಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಶಂಕಿತ ವ್ಯಕ್ತಿಗಾಗಿ ಬ್ಯಾಂಕಾಕ್ ನ ಹಿರಿಯ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಸಿಟಿವಿ ದೃಶ್ಯಾವಳಿ ಕುರಿತಂತೆ ಮಾತನಾಡಿರುವ ಥಾಯ್ಲೆಂಡ್ ಪ್ರಧಾನಮಂತ್ರಿ ಪ್ರಯುತ್ ಚಾನ್ ಒ ಚಾ ಅವಪರು, ದೇವಾಲಯದ ಬಳಿ ಸಂಭವಿಸಿದ ಸ್ಪೋಟಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ದೊರಕಿದ್ದು, ಶಂಕಿತ ವ್ಯಕ್ತಿಯೊಬ್ಬನನ್ನು ಗುರ್ತಿಸಲಾಗಿದೆ. ಆದರೆ, ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ. ಶಂಕಿತ ವ್ಯಕ್ತಿ ಸರ್ಕಾರ ವಿರೋಧಿ ಸಂಘಟನೆಯೊಂದಕ್ಕೆ ಸೇರಿದ ವ್ಯಕ್ತಿಯಾಗಿರಬಹುದು ಎಂದು ಗುರ್ತಿಸಲಾಗಿದೆ ಎಂದು ಹೇಳಿದ್ದಾರೆ.
ಬ್ಯಾಂಕಾಕ್ ನಲ್ಲಿ ಮಯೋಟಾರ್ ಸೈಕಲ್ ನಲ್ಲಿ ಇಡಲಾಗಿದ್ದ ಬಾಂಬ್ ಸ್ಪೋಟಗೊಂಡ ಪರಿಣಾಮ ಸ್ಥಳದಲ್ಲಿಯೇ 25 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರಲ್ಲದೇ, ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.