ಬಿಬಿಎಂಪಿ ಚುನಾವಣೆ ಫಲಿತಾಂಶಕ್ಕೆ 2 ದಿನ, ಮಂಗಳವಾರ ಎಣಿಕೆ

ರಾಜಧಾನಿ ಬೆಂಗಳೂರಿನ ಮತದಾರರು ಬಿಬಿಎಂಪಿ ಚುನಾವಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಕಳೆದ ಸಲಕ್ಕಿಂತ ಶೇಕಡವಾರು ಮತದಾನ ಪ್ರಮಾಣ ತುಸು ಹೆಚ್ಚಳವಾದರೂ ಒಟ್ಟಾರೆ ಪ್ರಮಾಣ...
ಬಿಬಿಎಂಪಿ ಚುನಾವಣೆ ಫಲಿತಾಂಶಕ್ಕೆ 2 ದಿನ, ಮಂಗಳವಾರ ಎಣಿಕೆ
Updated on: 

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮತದಾರರು ಬಿಬಿಎಂಪಿ ಚುನಾವಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಕಳೆದ ಸಲಕ್ಕಿಂತ ಶೇಕಡವಾರು ಮತದಾನ ಪ್ರಮಾಣ ತುಸು ಹೆಚ್ಚಳವಾದರೂ ಒಟ್ಟಾರೆ ಪ್ರಮಾಣ ಶೇ.50 ದಾಟಬಹುದು. ಚುನಾವಣಾ ಆಯೋಗದಿಂದ ತಡರಾತ್ರಿ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಶೇ.49.25ರಷ್ಟು ಮತದಾನ
ನಡೆದಿದೆ. ಒಟ್ಟಾರೆ ಸುಶಿಕ್ಷಿತ ಮತದಾರರಿಂದ ನೀರಸ ಪ್ರತಿಕ್ರಿಯೆ ದೊರೆತಿರುವ ಬೆನ್ನಲ್ಲೇ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಲೆಕ್ಕಾಚಾರಗಳು ರಾಜಕೀಯ ಪಕ್ಷಗಳಲ್ಲಿ ಗರಿಗೆದರಿವೆ.

ಮತಗಳ ಎಣಿಕೆ ಇದೇ 25ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಮೂರನೇ ಸ್ಥಾನಕ್ಕಾಗಿ ಜೆಡಿಎಸ್ ಹೋರಾಟ ನಡೆಸಿದೆ. 2010ರಲ್ಲಿ ನಡೆದ ಬಿಬಿಎಂಪಿ ಚುನಾವಣೆಗೆ ಹೋಲಿಸಿದರೆ (ಶೇ.44) ಈ ಬಾರಿ ಮತದಾನ ಪ್ರಮಾಣದಲ್ಲಿ ತುಸು ಹೆಚ್ಚಳವಾಗಿರುವುದರಿಂದ ಯಾರಿಗೆ ಅನುಕೂಲ-ಅನನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ಮುಳುಗಿವೆ.

ಎಣಿಕೆ ಕೇಂದ್ರಗಳು ಎಲ್ಲೆಲ್ಲಿ?

  • ಯಲಹಂಕ: ಬಿಇಎಲ್ ಪ್ರಾಥಮಿಕ ಶಾಲೆ ಮತ್ತು ಪಿಯು ಕಾಲೇಜು, ಯಲಹಂಕ.
  • ಕೆಆರ್ ಪುರ: ಐಟಿಐ ಸೆಂಟರ್ ಶಾಲೆ, ವಿದ್ಯಾ ಮಂದಿರ, ಐಟಿಐ ಕಾಲೋನಿ, ದೂರವಾಣಿನಗರ.
  • ಬ್ಯಾಟರಾಯನಪುರ: ಬಿಇಎಲ್ ಪ್ರಾಥಮಿಕ ಶಾಲೆ ಮತ್ತು ಪಿಯು ಕಾಲೇಜು, ಬಿಇಎಲ್ ಆಸ್ಪತ್ರೆ, ಬಿಇಎಲ್ ರಸ್ತೆ.
  • ಯಶವಂತಪುರ: ಯಶವಂತಪುರ ಕೆಂಗೇರಿ ಎಜುಕೇಷನ್ ಸೊಸೈಟಿ, ಮೈಸೂರು ರಸ್ತೆ, ಕೆಂಗೇರಿ ಕೋಟೆ.
  • ರಾಜರಾಜೇಶ್ವರಿನಗರ: ಜ್ಞಾನಾಕ್ಷಿ ವಿದ್ಯಾನಿಕೇತನ, ಹಲಗೆವಡೆಯರಹಳ್ಳಿ, ಮಣಿಪಾಲ ಆಸ್ಪತ್ರೆ ರಸ್ತೆ, ರಾಜರಾಜೇಶ್ವರಿನಗರ.
  • ದಾಸರಹಳ್ಳಿ: ಸರ್ಕಾರಿ ಪ್ರೌಢಶಾಲೆ, ಕಾಳಹಸ್ತಿನಗರ,ದಾಸರಹಳ್ಳಿ.
  • ಮಹಾಲಕ್ಷ್ಮಿಲೇಔಟ್: ಕರ್ನಾಟಕ ಮರಾಠ ಕ್ಷೇಮಾಬಿsವೃದಿಟಛಿ ಸಂಘ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಂಚೆ ಕಚೇರಿ ಬಳಿ, ಮಹಾಲಕ್ಷ್ಮಿಪುರ.
  • ಮಲ್ಲೇಶ್ವರ: ಸರ್ಕಾರಿ ಕಿರಿಯ ಕಾಲೇಜು, 18ನೇ ಅಡ್ಡರಸ್ತೆ, ಮಲ್ಲೇಶ್ವರ.
  • ಹೆಬ್ಬಾಳ: ಪಶು ವೈದ್ಯಕೀಯ ಕಾಲೇಜು, ಹೆಬ್ಬಾಳ ಪೊಲೀಸ್ ಠಾಣೆ ಬಳಿ, ಬಳ್ಳಾರಿ ರಸ್ತೆ, ಹೆಬ್ಬಾಳ.
  • ಪುಲಕೇಶಿನಗರ: ಬಿಬಿಎಂಪಿ ಪಿಯು ಬಾಲಕಿಯರ ಕಾಲೇಜು, ಕ್ಲೈವ್‍ಲಾಂಡ್ ಟೌನ್, ಫ್ರೇಜರ್ ಟೌನ್.
  • ಸರ್ವಜ್ಞನಗರ: ಮರಿಯಾ ನಿಕೇತನ ಪ್ರೌಢ ಶಾಲೆ, ಡಿಕೋಸ್ಟಾ ಲೇಔಟ್, ಕುಕ್‍ಟೌನ್.
  • ಸಿವಿ ರಾಮನ್‍ನಗರ: ಸೇಂಟ್ ಅಲೋಷಿಯಸ್ ಶಾಲೆ ಮತ್ತು ಕಾಲೇಜು, ಕಾಕ್ಸ್ ಟೌನ್.
  • ಶಿವಾಜಿನಗರ: ಕಮಲಾ ಬಾಯಿ ಶಾಲೆ, ಕ್ವೀನ್ಸ್ ರಸ್ತೆ, ವಸಂತನಗರ.
  • ಶಾಂತಿನಗರ: ಸೇಂಟ್ ಜೋಸೆಫ್ ಇಂಡಿಯನ್ ಪ್ರೌಢಶಾಲೆ, ವಿಠಲ್ ಮಲ್ಯ ರಸ್ತೆ.
  • ಗಾಂಧಿನಗರ: ವಿಎಚ್‍ಡಿ ಹೋಂ ಸೈನ್ಸ್ ಕಾಲೇಜು, ಅರಮನೆ ರಸ್ತೆ.
  • ರಾಜಾಜಿನಗರ: ಜಗಜ್ಯೋತಿ ಬಸವೇಶ್ವರ ಬಾಲಕಿಯರ ಶಾಲೆ, 17ನೇ ಮುಖ್ಯರಸ್ತೆ, ರಾಜಾಜಿನಗರ 2ನೇ ಹಂತ.
  • ಗೋವಿಂದರಾಜನಗರ: ಸರ್ವಜ್ಞ ನರ್ಸರಿ ಮತ್ತು ಪ್ರಾಥಮಿಕ ಶಾಲೆ, 5ನೇ ಮುಖ್ಯ ರಸ್ತೆ, ಮಾಗಡಿ ಕಾರ್ಡ್ ರಸ್ತೆ ಲೇಔಟ್.
  • ವಿಜಯನಗರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂ. 5, 3ನೇ ಮುಖ್ಯರಸ್ತೆ, ವಿಜಯನಗರ 2ನೇ ಹಂತ.
  • ಚಾಮರಾಜಪೇಟೆ: ಬಿಬಿಎಂಪಿ ಪಿಯು ಕಾಲೇಜು, 6ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಈದ್ಗಾ ಮೈದಾನದ ಎದುರು, ಚಾಮರಾಜಪೇಟೆ.
  • ಚಿಕ್ಕಪೇಟೆ: ಬಿಎಂಎಸ್ ಬಾಲಕಿಯರ ಕಾಲೇಜು, ಬಸವನಗುಡಿ ರಸ್ತೆ, ಬಸವನಗುಡಿ.
  • ಬಸವನಗುಡಿ: ಪಿಇಎಸ್ ಕಾಲೇಜು, 50 ಅಡಿ ರಸ್ತೆ, ಮೀನಾಕ್ಷಿ ಆಸ್ಪತ್ರೆ ಬಳಿ, ಶ್ರೀನಗರ.
  • ಪದ್ಮನಾಭನಗರ: ಕೆಂಪೇಗೌಡ ವೈದ್ಯಕೀಯ ಕಾಲೇಜು, ನಂ. ಸಿಎ.19/21, 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ.
  • ಬಿಟಿಎಂ ಲೇಔಟ್: ಸೇಂಟ್ ಫ್ರಾನ್ಸಿಸ್ ಪ್ರೌಢ ಶಾಲೆ, ಸರ್ಜಾಪುರ ಮುಖ್ಯರಸ್ತೆ, 3ನೇ ಹಂತ, ಕೋರಮಂಗಲ.
  • ಜಯನಗರ: ಬಿಇಎಸ್ ಕಾಲೇಜು, ಜಯನಗರ 4ನೇ ಹಂತ.
  • ಮಹದೇವಪುರ: ಐಟಿಐ ವಿದ್ಯಾ ಮಂದಿರ, ಕನ್ನಡ ಪ್ರೌಢಶಾಲೆ ದೂರವಾಣಿನಗರ.
  • ಬೊಮ್ಮನಹಳ್ಳಿ: ಜೆಎಸ್‍ಎಸ್ ಪಬ್ಲಿಕ್ ಶಾಲೆ ಮತ್ತು ಬಾಲಕಿಯರ ಕಾಲೇಜು, 6ನೇ ಸೆಕ್ಟರ್, ಎಚ್‍ಎಸ್‍ಆರ್ ಲೇಔಟ್.
  • ಬೆಂಗಳೂರು ದಕ್ಷಿಣ ಮತ್ತು ಆನೇಕಲ್: ನ್ಯಾಷನಲ್ ಕಾಲೇಜು, ಜಯನಗರ 7ನೇ ಹಂತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com