ಸೇನಾ ತರಬೇತಿ ಶಿಬಿರದಲ್ಲಿ ಸ್ಫೋಟ: ೧೪ ಸೈನಿಕರಿಗೆ ಗಾಯ

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸೇನಾ ಶಿಬಿರವೊಂದರಲ್ಲಿ ಘಟಿಸಿದ ಸ್ಫೋಟದಿಂದ ಶನಿವಾರ ೧೪ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸೇನಾ ಶಿಬಿರವೊಂದರಲ್ಲಿ ಘಟಿಸಿದ ಸ್ಫೋಟದಿಂದ ಶನಿವಾರ ೧೪ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಖ್ರ್ಯೂ ಪ್ರದೇಶದ ಕಾರ್ಪ್ಸ್ ಬ್ಯಾಟಲ್ ಶಾಲೆಯ ಒಳಗೆ ಶನಿವಾರ ಆದ ಸ್ಫೋಟದಲ್ಲಿ ೧೪ ಸೈನಿಕರು ಗಾಯಗೊಂಡಿದ್ದಾರೆ" ಎಂದು ರಕ್ಷಣಾ ಮೂಲಗಳು ತಿಳಿಸಿವೆ.

"ಸ್ಫೋಟಕ ಯಂತ್ರವನ್ನು ಸರಿಯಾಗಿ ಬಳಸದಿದ್ದರಿಂದ ಈ ಸ್ಫೋಟ ಸಂಭವಿಸಿತು. ಇಲ್ಲಿಯವರೆಗೆ ಯಾವುದೇ ಸಾವು ವರದಿಯಾಗಿಲ್ಲ. ಮೂರು ಜನಕ್ಕೆ ಗಂಭೀಯ ಗಾಯಗಳಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com