ಸರಿ ಬೆಸ ಸಂಖ್ಯೆಯ ವಾಹನ ಕಣಿವಾಣ ನಿಯಮಕ್ಕೆ ತಡೆ ಹಾಕಲು ನಿರಾಕರಿಸಿದ ಹೈಕೋರ್ಟ್

ರಾಜಧಾನಿ ದೆಹಲಿಯಲ್ಲಿ ಜನವರಿ ೧ ರಿಂದ ಜಾರಿಗೆ ಬರಲಿರುವ, ಸರಿ ಬೆಸ ಕೊನೆ ಅಂಕಿಯ ಆಧಾರದ ಮೇಲೆ ಬದಲಿ ದಿನ ವಾಹನ ಚಲಾಯಿಸದಿರುವ ನಿಯಮಕ್ಕೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಜನವರಿ ೧ ರಿಂದ ಜಾರಿಗೆ ಬರಲಿರುವ, ಸರಿ ಬೆಸ ಕೊನೆ ಅಂಕಿಯ ಆಧಾರದ ಮೇಲೆ ಬದಲಿ ದಿನ ವಾಹನ ಚಲಾಯಿಸದಿರುವ ನಿಯಮಕ್ಕೆ ತಡೆಹಾಕಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಇದು ಪ್ರಯೋಗಾತ್ಮಕವಾದದ್ದು ಎಂದಿದೆ.

ಮುಖ್ಯ ನ್ಯಾಯಾಧೀಶೆ ಜಿ ರೋಹಿಣಿ ಮತ್ತು ನ್ಯಾಯಧೀಶ ಜಯಂತ್ ನಾಥ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ದೆಹಲಿ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ ೨೩ ಕ್ಕೆ ಮೂಂದೂಡಿದೆ.

"ಇದಿನ್ನೂ ಮೊದಲ ಹಂತದಲ್ಲಿದೆ. ಇದನ್ನು ವಿರೋಧಿಸಿ ಏಕೆ ಅರ್ಜಿ ಸಲ್ಲಿಸುತ್ತಿದ್ದೀರಿ. ದೆಹಲಿ ಸರ್ಕಾರ ಹಲವಾರು ಜನರೊಂದಿಗೆ ಇದನ್ನು ಚರ್ಚಿಸುತ್ತಿದೆ. ಮತ್ತು ಜನವರಿ ೧ ೨೦೧೬ ರಿಂದ ಪ್ರಯೋಗಾತ್ಮಕವಾಗಿ ಇದು ಜಾರಿಗೆ ಬರಲಿದೆ. ಇದು ಕಾಯ್ದೆ/ನಿಯಮ ಅಲ್ಲ. ಇದು ಪ್ರಸ್ತಾವನೆ. ಸರ್ಕಾರಕ್ಕೆ ಒತ್ತಡ ತರಲು ಈ ರೀತಿಯ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸುವುದು ತರವಲ್ಲ" ಎಂದು ಪ್ರಕರಣ ಮುಂದೂಡಿರುವ ವಿಭಾಗೀಯ ಪೀಠ ತಿಳಿಸಿದೆ.

ದೆಹಲಿ ಸರ್ಕಾರದ ಪರವಾಗಿ ವಾದ ಮಾಡಿದ ವಕೀಲ ರಾಹುಲ್ ಮೆಹ್ರಾ, ಸರ್ಕಾರ ಹಲವಾರು ಜನರೊಂದಿಗೆ ಮಾತುಕತೆ ನಡೆಸಿದೆ ಎಂದು ತಿಳಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿ, ಅದನ್ನು ವಜಾ ಮಾಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com