ಬೆಂಗಳೂರಿನಲ್ಲೂ ದೆಹಲಿಯಂತೆ ಸಮ, ಬೆಸ ಸಂಖ್ಯೆಯ ವಾಹನ ಸಂಚಾರಕ್ಕೆ ಚಿಂತನೆ: ಪರಮೇಶ್ವರ

ಬೆಂಗಳೂರಿನಲ್ಲೂ ದೆಹಲಿಯಂತೆ ಒಂದು ಸಮ ಸಂಖ್ಯೆಯ ವಾಹನ ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನ ಸಂಚಾರ ಯೋಜನೆ ಜಾರಿಗೆ ತರುವ ಬಗ್ಗೆ....
ಜಿ. ಪರಮೇಶ್ವರ
ಜಿ. ಪರಮೇಶ್ವರ
Updated on: 

ಬೆಂಗಳೂರು: ಬೆಂಗಳೂರಿನಲ್ಲೂ ದೆಹಲಿಯಂತೆ ಒಂದು ಸಮ ಸಂಖ್ಯೆಯ ವಾಹನ ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನ ಸಂಚಾರ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಬುಧವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಬೆಂಗಳೂರು ನಗರದಲ್ಲಿ ಒಟ್ಟು 58 ಲಕ್ಷ ವಾಹನಗಳಿದ್ದು, ಇಷ್ಟೊಂದು ವಾಹನಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಬೆಂಗಳೂರಿನ ರಸ್ತೆಗಳಿಗಿಲ್ಲ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸಮ, ಬೆಸ ಸಂಖ್ಯೆಯ ಆಧಾರದಲ್ಲಿ ವಾಹನಗಳ ಸಂಚಾರ ನಿಯಮ ಜಾರಿಗೆ ತರುವ ಚಿಂತನೆ ಇದೆ ಎಂದರು.

ವಾಹನ ಸಂಚಾರ ಪರಿಹಾರದ ಬಗ್ಗೆ ತಜ್ಞನ ಸಮಿತಿ ರಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ಚೆನ್ನಾಗಿದೆ. ಆದರೆ ಅದು ಸಮರ್ಪಕ ಬೆಳಕೆಯಾಗಬೇಕಿದೆ ಎಂದು ಗೃಹ ಸಚಿವರು ಅಭಿಪ್ರಾಯ ಪಟ್ಟರು.

ನಗರದಲ್ಲಿ ಸಂಚಾರ ಸಮಸ್ಯೆ ಪರಿಹರಿಸಲು ನಿರಂತರ ಯತ್ನಿಸುತ್ತಿದ್ದೇವೆ. ಸಂಚಾರ ಪರಿಹಾರದ ಬಗ್ಗೆ ತಜ್ಞನ ಸಮಿತಿ ರಚಿಸಲು ಸಹ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪರಮೇಶ್ವರ ತಿಳಿಸಿದರು. ಅಲ್ಲದೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಕಾರ್ಯಪಡೆ ರಚನೆಗೂ ನಿರ್ಧರಿಸಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com