ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1

ಬೆಂಗಳೂರು ಎಂದರೆ ಎಲ್ಲರಿಗೂ ಇಷ್ಟ, ಆದರೆ ಬೆಂಗಳೂರಿಗೆ ಏನೇನು ಇಷ್ಟ ಅಂತ ನೀವು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಹೃದಯವನ್ನು ಒಮ್ಮೆ ಗಟ್ಟಿ ಮಾಡಿಕೊಳ್ಳಿ?...
ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1 (ಸಂಗ್ರಹ ಚಿತ್ರ)
ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1 (ಸಂಗ್ರಹ ಚಿತ್ರ)

ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಮೊದಲ ಸ್ಥಾನ ಪಡೆದ ಸಿಲಿಕಾನ್ ಸಿಟಿ ಬೆಂಗಳೂರು, ವಿಷ ಗಾಳಿಯಲ್ಲೂ ನಾವೇ ಫಸ್ಟ್

ಬೆಂಗಳೂರು:
ಬೆಂಗಳೂರು ಎಂದರೆ ಎಲ್ಲರಿಗೂ ಇಷ್ಟ, ಆದರೆ ಬೆಂಗಳೂರಿಗೆ ಏನೇನು ಇಷ್ಟ ಅಂತ ನೀವು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಹೃದಯವನ್ನು ಒಮ್ಮೆ ಗಟ್ಟಿ ಮಾಡಿಕೊಳ್ಳಿ?

ಸುಮಾರು 800 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತಾರವಾಗಿರುವ ಬೆಂಗಳೂರು ಪ್ರತಿ ದಿನ ಬೆಳೆಯುತ್ತಲೇ ಇದೆ. ಇದಕ್ಕೆ ಪೈಪೋಟಿ ಎನ್ನುವಂತೆಯೇ ವಾಯುಮಾಲಿನ್ಯ, ಶಬ್ಧ ಮಾಲಿನ್ಯ, ಅತಿ ಹೆಚ್ಚು ಜನಸಂಖ್ಯೆಯೂ ಬೆಳೆಯುತ್ತಿದೆ. ಈಗ ದಿಗ್ಭ್ರಮೆ ಮೂಡಿಸಿರುವ ಅಂಶವೇನೆಂದರೆ ಇವಿಷ್ಟು ಅಂಶಗಳು ಇತಿಮಿತಿಯಿಲ್ಲದೆ ಬೆಳೆಯುತ್ತಿರುವುದು ಇಲ್ಲಿನ ನಾಗರಿಕರಿಗೆ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ಸಮಗ್ರ, ಅಧ್ಯಯನ ನಡೆಸಿರುವ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವೈರ್ ಮೆಂಟ್ (ಸಿಎಸ್ಇ) ವರದಿಯೊಂದನ್ನು ಬಿಡುಗಡೆ ಮಾಡಿ, ಅದರ ಬಗ್ಗೆ ಶುಕ್ರವಾರ ಸಾರ್ವಜನಿಕರೊಂದಿಗೆ ಸಂವಾದ ನಡೆಸಿತು.

ನಗರದಲ್ಲಿ ಎಗ್ಗಿಲ್ಲದೆ ವ್ಯಾಪಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣ ಶೇ.57 ರಷ್ಟು ಹೆಚ್ಚಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ಪೈಕಿ ವಾಯುಮಾಲಿನ್ಯ ಹೆಚ್ಚಳದಲ್ಲಿ ಬೆಂಗಳೂರು (140 ಮೈಕ್ರೋಗ್ರಾಂ ಪರ್ ಕ್ಯೂಬಿಕ್ ಮೀಟರ್) ಮೊದಲ ಸ್ಥಾನದಲ್ಲಿದ್ದರೆ, ವಿಜಯವಾಡ (100), ಹೈದರಾಬಾದ್ (98), ಚೆನ್ನೈ (59), ಕೊಯಮತ್ತೂರು (48) ಮಧುರೈ (45) ನಂತರದ ಸ್ನಾನ ಪಡೆದುಕೊಂಡಿವೆ. ಇನ್ನು ನಗರದೊಳಕ್ಕೆ ಬಂದರೆ ವೈಟ್ ಫೀಲ್ಡ್ ಅತೀ ಹೆಚ್ಚು ವಾಯುಮಾಲಿನ್ಯ ಹೊಂದಿದೆ. ನಂತರ ಆಮ್ಕೋ ಬ್ಯಾಟರೀಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ವಿಕ್ಟೋರಿಯಾ ರಸ್ತೆಯ ಡಿಟಿಡಿಸಿ ಹೌಸ್ ಪಡೆದುಕೊಂಡಿವೆ. ಕೊನೆಯ ಸ್ಥಾನದಲ್ಲಿ ಅಂದರೆ ಅತಿ ಕಡಿಮೆ ಮಾಲಿನ್ಯ ಹೊಂದಿರುವ ಪ್ರದೇಶದಲ್ಲಿ ಬಸವೇಶ್ವರನಗರ, ದೊಮ್ಮಲೂರು ಸಮಾನ ಸ್ಥಾನ ಪಡೆದಿವೆ.

ರೋಗಗಳು ಉಚಿತ ವಾಯುಮಾಲಿನ್ಯ ಹೆಚ್ಚಾದರೆ ಮೊದಲು ಬಲಿಯಾಗುವುದು ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುವವರು. ಉಳಿದಂತೆ ಮನೆಯೊಳಗಿದ್ದುಕೊಂಡು ಕೆಟ್ಟ ಗಾಳಿ ಸೇವಿಸಿ ಸತ್ತವರ ಸಂಖ್ಯೆ ಶೇ. 4.3 ರಷ್ಟಿದ್ದರೆ, ಮನೆಯ ಹೊರಗಿದ್ದು ಸತ್ತವರ ಸಂಖ್ಯೆ 3.7 ರಷ್ಟಿದೆ. ಹೆಚ್ಚುತ್ತಿರುವ ಮಾಲಿನ್ಯದಿಂದ ಕ್ಯಾನ್ಸರ್, ಪಾಶ್ರ್ವವಾಯು, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಬಾಧಿಸುತ್ತವೆ. ಈ ಕಾಯಿಲೆಗಳ ನಿಯಂತ್ರಣಕ್ಕೆ ಹಣ್ಣು, ತರಕಾರಿ, ಬೆಣ್ಣೆ, ಮೊಸರು, ಮೀನು, ಉಪ್ಪಿನಕಾಯಿ, ವೈನ್ ಸೇವಿಸಬೇಕು. ಎಣ್ಣೆ ವಿಧದಲ್ಲಿ ಆಲೀವ್ ಎಣ್ಣೆ, ಸಫೋಲಾ ಎಣ್ಣೆ, ತೆಂಗಿನ ಎಣ್ಣೆ ಸೇವಿಸಬಹುದು ಎಂದು ವರದಿ ತಿಳಿಸಿದೆ.

ಎಲ್ಲೆಲ್ಲಿ, ಯಾವ ಯಾವ ಮಾಲಿನ್ಯ ಹೆಚ್ಚು?

  • ಬೆಂಗಳೂರಿನ ಆಮ್ಕೋ ಬ್ಯಾಟರೀಸ್ ಹೆಚ್ಚು ನೈಟ್ರೋಜನ್ ಆಕ್ಸಿಡ್ ಅನ್ನು ಬಿಡುಗಡೆ ಮಾಡಿ ವಾಯುವನ್ನು ಕಲುಷಿತಗೊಳಿಸಿದೆ.
  • ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 8 ರಿಂದ ಮಧ್ಯರಾತ್ರಿ 1 ಗಂಟೆಯ ಅವಧಿಯಲ್ಲಿ ಉಸಿರಾಡುವ ಗಾಳಿಯಲ್ಲಿ ಹೆಚ್ಚು ಧೂಳಿನ ಕಣ ತೇಲುತ್ತವೆ.
  • ಇಂದಿರಾಗಾಂಧಿ ಚೈಲ್ಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಉಂಟಾಗಿದೆ. ಕಾರಣ ಹೆಚ್ಚು ಆಟೋಗಳ ಓಡಾಟದಿಂದ.
  • ವಿಕ್ಟೋರಿಯಾ ಆಸ್ಪತ್ರೆ ಬಳಿ 2012-13, 2014-15ನೇ ಸಾಲಿನ ಹೆಚ್ಚು ವಾಯು ಮಾಲಿನ್ಯ ಉಂಟಾಗಿದೆ. ಕಾರಣ ಮೆಟ್ರೋ ಕಾಮಗಾರಿ.
  • ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ವರ್ಷದಿಂದ ವರ್ಷಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆಯೇ ಹೊರತು ನಿಯಂತ್ರಣ ಕಷ್ಟಸಾಧ್ಯ ಎನ್ನಲಾಗಿದೆ.
  • ಯಶವಂತಪುರದಲ್ಲಿ 2012-13 ರಲ್ಲಿ ಬಸ್ ನಿಲ್ದಾಣ ನಿರ್ಮಿಸುತ್ತಿದ್ದರಿಂದ ಮಾಲಿನ್ಯ ಹೆಚ್ಚಾಗಿತ್ತು. ನಂತರ ಒಂದು ವರ್ಷ ಬಿಟ್ಟು, ಈಗ ಮತ್ತೆ ಮಾಲಿನ್ಯ ಹೆಚ್ಚಾಗಿದೆ.
ವಿಷ ಗಾಳಿಯಲ್ಲೂ ಫಸ್ಟ್
ಎಲೆಕ್ಟಿಕಲ್ ಬಸ್ ಬೇಕು
ಮಾಲಿನ್ಯ ತಡೆಗೆ ಹೈ ಕೋರ್ಟ್ ಏನು ಹೇಳಿದೆ?
  • ನೂತನ ವಾಹನ ನೋಂದಣಿ ನಿಯಂತ್ರಣ ಭಾರೀ ವಾಹನ ಪ್ರವೇಶ ನಿರ್ಬಂಧ
  • ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಸ್ಟ್ರೋಕ್ ದ್ವಿಚಕ್ರ ವಾಹನ ನಿಷೇಧ
  • ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಆಟೋರಿಕ್ಷಾ ಸಂಚಾರ ನಿರ್ಬಂಧ
  • 15 ವರ್ಷಗಳಿಗಿಂತ ಹಳೆಯದಾದ ಭಾರಿ ವಾಹನ ನಿಷೇಧ
  • ಕಾಲಕಾಲಕ್ಕೆ ವಾಹನಗಳ ಹೊಗೆ ಪರೀಕ್ಷಿಸಲು ಕೇಂದ್ರ ಸ್ಥಾಪನೆ
ಮಾಲಿನ್ಯ ತಪ್ಪಿಸುತ್ತಿದೆ ಬಸ್
ಮಾಲಿನ್ಯ ತಡೆಗೆ ಏನು ಕ್ರಮ?
  • ಸಾರ್ವಜನಿಕ ಬಸ್ಸುಗಳ ಸಂಖ್ಯೆ ಹೆಚ್ಚುಸುವುದು
  • ವಾಹನಗಳ ಕಾರ್ಯಕ್ಷಮತೆ, ಗುಣಮಟ್ಟ ಕಾಪಾಡುವುದು
  • ತಂತ್ರಜ್ಞಾನ, ಮೂಲಸೌಕರ್ಯ, ಸೇವೆಯಲ್ಲಿ ಸುಸ್ಥಿರತೆ
  • ಮಾದರಿ ಬಸ್ ಡಿಪೋ, ಸಂಚಾರ ನಿರ್ವಹಣೆಗೆ ಅಗತ್ಯ ಕ್ರಮ
ಕೇಂದ್ರ ಕಚೇರಿಯಲ್ಲೇ ಮಾಲಿನ್ಯ!

ಇದು ಸಿಎಸ್ಇ ವರದಿ
ಅತಿ ಹೆಚ್ಚು ವಾಯುಮಾಲಿನ್ಯ
  • ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ
  • ಕೆಎಚ್ ಬಿ ಕೈಗಾರಿಕಾ ಪ್ರದೇಶ
  • ಯಲಹಂಕ
  • ಪೀಣ್ಯ ಕೈಗಾರಿಕಾ ಪ್ರದೇಶ
ಅತಿ ಕಡಿಮೆ ವಾಯುಮಾಲಿನ್ಯ
  • ಬಸವೇಶ್ವರ ನಗರ
  • ಟಿಇಆರ್ಐ ದೊಮ್ಮಲೂರು
ಅತಿ ಹೆಚ್ಚು ಶಬ್ಧ ಮಾಲಿನ್ಯ ಪ್ರದೇಶಗಳು
  • ಪೀಣ್ಯ ಕೈಗಾರಿಕಾ ಪ್ರದೇಶ
  • ಪರಿಸರ ಭವನ, ಚರ್ಚ್ ರಸ್ತೆ
  • ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ
ಅತಿ ಕಡಿಮೆ ಶಬ್ಧ ಮಾಲಿನ್ಯ
  • ಆರ್ ವಿಸಿ/ಇ ಮೈಸೂರು ರಸ್ತೆ
  • ನಿಮ್ಹಾನ್ಸ್ ಆಸ್ಪತ್ರೆ
  • ಬಿಟಿಎಂ ಲೇ ಔಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com