ಗ್ಯಾಂಗ್ ರೇಪ್ ಆರೋಪ; ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಸೇನಾ ಜವಾನ

ಹೌರಾ-ಅಮೃತಸರ ಎಕ್ಸ್ಪ್ರೆಸ್ ನ ಭೋಗಿಯೊಂದರಲ್ಲಿ ಅಪ್ರಾಪ್ತೆಯನ್ನು ಗ್ಯಾಂಗ್ ರೇಪ್ ಮಾಡಿರುವ ಆರೋಪದಲ್ಲಿ ಸೇನೆಯ ಜವಾನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹೌರಾ(ಪಶ್ಚಿಮ ಬಂಗಾಳ): ಹೌರಾ-ಅಮೃತಸರ ಎಕ್ಸ್ಪ್ರೆಸ್ ನ ಭೋಗಿಯೊಂದರಲ್ಲಿ ಅಪ್ರಾಪ್ತೆಯನ್ನು ಗ್ಯಾಂಗ್ ರೇಪ್ ಮಾಡಿರುವ ಆರೋಪದಲ್ಲಿ ಸೇನೆಯ ಜವಾನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಆದೇಶಿಸಿ ಪ್ರಾದೇಶಿಕ ಕೋರ್ಟ್ ತೀರ್ಪು ನಿಡಿದೆ.  

ಮಾಧುಪುರ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ ಮಾಂಜಿರಿಸ್ ತ್ರಿಪಾಠಿಯನ್ನು ಹೌರಾ ಮೆಜೆಸ್ಟ್ರೆಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ಪೊಲೀಸ್ ಬಂಧನದಲ್ಲಿ ಇರಿಸಲಾಗಿದೆ.

ಪೂರ್ವ ಕಮ್ಯಾಂಡ್ ಹೆಡ್ಕ್ವಾರ್ಟರ್ ನಲ್ಲಿ ನಿಯೋಜಿಸಲಾಗಿರುವ ತ್ರಿಪಾಠಿ, ಹೌರಾ ನಿಲಾಣ್ದಲ್ಲಿ ರೈಲು ಏರಿದ ೧೪ ವರ್ಷದ ಬಾಲಕಿಯನ್ನು ಮದ್ಯ ಕುಡಿಯುವಂತೆ ಬಲವಂತಿಸಿದ್ದಾನೆ. ನಂತರ ಇವನ ಜೊತೆ ಇನ್ನಿಬ್ಬರು ಸೇನಾ ಜವಾನರು ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ. ಆ ಇನ್ನಿಬ್ಬರು ತಲೆತಪ್ಪಿಸಿಕೊಂಡಿದ್ದಾರೆ.

ಮೆಜೆಸ್ಟ್ರೆಟ್ ನ್ಯಾಯಾಲಯದಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com