ಇಸ್ಲಾಮಿಕ್ ಸ್ಟೇಟ್ ವಿರುದ್ಧ ಅಮೇರಿಕಾ ನೇತೃತ್ವದಲ್ಲಿ ೨೦ಕ್ಕೂ ಹೆಚ್ಚು ವೈಮಾನಿಕ ದಾಳಿ

ಯು ಎಸ್ ನೇತೃತ್ವದ ಸಮ್ಮಿಶ್ರ ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟ್ (ಐ ಎಸ್) ವಿರುದ್ಧ
ಇಸ್ಲಾಮಿಕ್ ಸ್ಟೇಟ್
ಇಸ್ಲಾಮಿಕ್ ಸ್ಟೇಟ್
Updated on: 

ಯು ಎಸ್ ನೇತೃತ್ವದ ಸಮ್ಮಿಶ್ರ ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟ್ (ಐ ಎಸ್) ವಿರುದ್ಧ ಭಾನುವಾರದಿಂದ ೨೦ಕ್ಕೂ ಹೆಚ್ಚು ವೈಮಾನಿಕ ದಾಳಿ ನಡೆಸಿವೆ ಎಂದು ಸಂಯುಕ್ತ ಟ್ಯಾಸ್ಕ್ ಫೋರ್ಸ್ ಮೂಲಗಳು ತಿಳಿಸಿವೆ.

ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಟ್ಯಾಸ್ಕ್ ಫೋರ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಗೆಳೆಯ ರಾಷ್ಟ್ರಗಳು ಸಿರಿಯಾದಲ್ಲಿ ಐ ಎಸ್ ಉಗ್ರರ ಮೇಲೆ ೧೪ ವೈಮಾನಿಕ ದಾಳಿಯನ್ನು ನಡೆಸಿದ್ದು, ಇರಾಕ್ ನಲ್ಲಿ ೬ ದಾಳಿಗಳನ್ನು ನಡೆಸಿದೆ ಎಂದಿದೆ. ಈ ವೈಮಾನಿಕ ದಾಳಿ ಇಸ್ಲಾಮಿಕ್ ಸ್ಟೇಟ್ ನ ಹಲಾವಾರು ಘಟಕಗಳು, ಅವರ ಇಂಧನ ಸಂಗ್ರಹ ಕೆಂದ್ರಗಳು ಮತ್ತು ಅವುಗಳ ಪೈಪ್ ಲೈನ್ ಗಳನ್ನೂ ನಾಶಪಡಿಸಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com