

ಪ್ಯಾರಿಸ್: ಪೂರ್ವ ಪ್ಯಾರಿಸ್ ನ ಕೋಶರ್ ಸೂಪರ್ ಮಾರ್ಕೆಟ್ ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬನು ಗಾಯಗೊಂಡಿದ್ದು, ೫ ಜನರನ್ನು ಉಗ್ರಗಾಮಿಯೊಬ್ಬ ಒತ್ತೆಯಿರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ನೆನ್ನೆ ದಕ್ಷಿಣ ಪ್ಯಾರಿಸ್ ನಲ್ಲಿ ಮಹಿಳಾ ಪೊಲೀಸ್ ಒಬ್ಬರಿಗೆ ಗುಂಡು ಹಾರಿಸಿದವನು ಇವನೇ ಎಂದು ಶಂಕಿಸಲಾಗಿದೆ.
ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ದಾಳಿ ನಡೆಸಿ ೧೨ ಜನರನ್ನು ಕೊಂದ ಉಗ್ರಗಾಮಿಗಳಿಗೆ ಸಂಬಂಧಿಸಿದವನು ಇವನು ಎನ್ನಲಾಗಿದೆ.
ಈಗ ಆ ಸೂಪರ್ ಮಾರ್ಕೆಟ್ ಅನ್ನು ಪೊಲೀಸರು ಸುತ್ತುವರೆದಿದ್ದು, ಒಂದು ಹೆಲಿಕ್ಯಾಪ್ಟರ್ ಕೂಡ ಉಗ್ರಗಾಮಿಯನ್ನು ಬಂಧಿಸಲು ಗಸ್ತು ಸುತ್ತುತ್ತಿದೆ ಎನ್ನಲಾಗಿದೆ.