

ನವದೆಹಲಿ: ಬಿಜೆಪಿಯ ಕಿರಣ್ ಬೇಡಿ ಮತ್ತು ಆಪ್ ಪಕ್ಷದ ಅರವಿಂದ್ ಕೇಜ್ರಿವಾಲ್ ನಡುವೆ ಕಾಂಗ್ರೆಸ್ ಮೂರನೆ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎಂಬದು ಬಹಳ ಜನರ ಅಭಿಮತ. ಗಾಯಕ್ಕೆ ಉಪ್ಪು ಸವರಿದಂತೆ ದೆಹಲಿಯ ಕಾಂಗ್ರೆಸ್ ಪಕ್ಷದ ಅಂತರ್ಜಾಲ ತಾಣ ಈಗ ಬಂದ್ ಆಗಿದೆ.
ದೆಹಲಿ ಕಾಂಗ್ರೆಸ್ ಅಂತರ್ಜಾಲ ತಾಣ (http://www.dpcc.co.in/) ಹಾಗೂ ಕಾಂಗ್ರೆಸ್ ನ ಅಂತರ್ಜಾಲ ಮುಖವಾಣಿ ಸಂದೇಶ್ (www.congressandesh.com) ಈಗ ಸದ್ಯಕ್ಕೆ ಚಾಲ್ತಿಯಲ್ಲಿರದ ವೆಬ್ಸೈಟ್ ಗಳು. ಈ ತಾಣಗಳನ್ನು ನಿರ್ವಹಿಸುತ್ತಿದ್ದ ಸಂಜಯ್ ಪೂರಿ ಕಾಂಗ್ರೆಸ್ ಪಕ್ಷದ ಜೊತೆ ಸಂಬಂಧ ಕಡಿದುಕೊಂಡಿರುವುದರಿಂದ ಈ ಬೆಳವಣಿಗೆ ಕಂಡಿದೆ ಎನ್ನಲಾಗಿದೆ.
ಈ ಎರಡು ತಾಣಗಳ ನಿರ್ವಹಣೆಗಾರ ಸಂಜಯ್ ಪೂರಿ ಕಳೆದ ೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸದಸ್ಯ. ಕಳೆದ ನಾಲ್ಕು ಚುನಾವಣೆಗಳಿಂದ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಮೂಲ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಜನಕ್ ಪುರಿ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಂಜಯ್ ಜೊತೆ ಭಿನಾಭಿಪ್ರಾಯಗಳಿವೆ, ಆದರೆ ಇವುಗಳು ಬಗೆಹರಿಯಲಿದ್ದು ಅವರು ಕಾಂಗ್ರೆನಲ್ಲಿ ಮುಂದುವರೆಯಲಿದ್ದಾರೆ ಎಮು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಸದ್ಯಕ್ಕಂತೂ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಇರುಸುಮುರುಸಾಗಿರುವುದಂತೂ ಖಚಿತ!