

ನವದೆಹಲಿ: ಭಾರತದ ವಿತ್ತ ಸಚಿವ ಅರುಣ್ ಜೇಟ್ಲಿ ೨೦೧೫-೧೬ರ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ ೨೮ ರಂದು ಮಂಡಿಸಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸಂಸತ್ ಅಧಿವೇಶನ ಫೆಬ್ರವರಿ ೨೩ ರಂದು ಪ್ರಾರಂಭವಾಗಲಿದ್ದು, ಫೆ.28 ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನ ಮಾರ್ಚ್ ೨೦ರವರೆಗೆ ಮುಂದುವರೆಯಲಿದೆ ಎಂದು ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ವರದಿಗಾರರಿಗೆ ತಿಳಿಸಿದ್ದಾರೆ. ಹೊಸ ಹಣಕಾಸು ವರ್ಷ ಏಪ್ರಿಲ್ ೧ಕ್ಕೆ ಪ್ರಾರಂಭವಾಗಲಿದೆ.