

ನವದೆಹಲಿ: ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ-ಟೀಂ, 2013ರಲ್ಲಿ ದೆಹಲಿಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಅರವಿಂದ್ ಕೇಜ್ರಿವಾಲ್ಗೆ ಸಹಾಯ ನೀಡುವ ಮೂಲಕ 'ಕಡಿಮೆ ಕೆಡುಕನ್ನು' ಆಯ್ಕೆ ಮಾಡಿಕೊಂಡಿತ್ತು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟಿಸಿದ್ದಾರೆ.
ಆಪ್ ಮತ್ತು ಕೇಜ್ರಿವಾಲ್ ಬಿಜೆಪಿಯ ಬಿ ಟೀಂ. ಹಾಗಾದರೆ ನಾವ್ಯಾಕೆ ಆಪ್ಗೆ ಬೆಂಬಲ ನೀಡಿದೆವು? ಎಂದು ನೀವು ಕೇಳಬಹುದು. ಬಿಜೆಪಿ ಮತ್ತು ಬಿ-ಟೀಂ ನ ನಡುವಿರುವವರನ್ನು ಆಯ್ಕೆ ನಮಗೆ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಅದಕ್ಕೆ ನಾವು ಕಮ್ಮಿ ಕೆಡುಕಿರುವುದನ್ನು ಆಯ್ಕೆ ಮಾಡಿದೆವು ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
2010ರಲ್ಲಿ ಕೇಜ್ರಿವಾಲ್ ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್ನ ಸಭೆಯಲ್ಲಿ ಆರೆಸ್ಸೆಸ್ ಸಂಘಟನೆಯ ಎಸ್. ಗುರುಮೂರ್ತಿ, ಕೆಎನ್ ಗೋವಿಂದಾಚರ್ಯ ಮತ್ತು ಇತರ ನೇತಾರರೊಂದಿಗೆ ಭಾಗವಹಿಸಿದ್ದರು.
ಕೇಜ್ರಿವಾಲ್ ಆರೆಸ್ಸೆಸ್ ನಾಯಕರೊಂದಿಗೆ ಸಭೆಯಲ್ಲಿ ಭಾಗವಹಿಸಿಲ್ಲವೆ? ಅಲ್ಲಿ ರಾಮ್ದೇವ್ ಮತ್ತು ಶ್ರೀ ಶ್ರೀ ರವಿಶಂಕರ್ ಕೂಡಾ ಉಪಸ್ಥಿತರಿರಲಿಲ್ಲವೆ? ಎಂದು ಪ್ರಶ್ನಿಸಿದ ದಿಗ್ವಿಜಯ್ ನಾನು ಹೇಳಿದ್ದೆಲ್ಲವೂ ನಿಜವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಆಮ್ ಆದ್ಮಿ ಪಕ್ಷವನ್ನು ಬಿಜೆಪಿಯ ಬಿ-ಟೀಂ ಎಂದು ಹೇಳಿರುವ ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಇದೆಲ್ಲವೂ ಕಾಂಗ್ರೆಸ್ಗೆ ತಿಳಿದಿದ್ದರೆ ದೆಹಲಿಯಲ್ಲಿ ಸರ್ಕಾರ ರಚಿಸುವಾಗ ಕಾಂಗ್ರೆಸ್ ಆಪ್ಗೆ ಬೆಂಬಲ ನೀಡಿದ್ದು ಯಾಕೆ? ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಪ್ರಶ್ನಿಸಿದ್ದಾರೆ.