ಗೋದಾವರಿ ದುರ್ಘಟನೆಗೆ ಮುಖ್ಯಮಂತ್ರಿ ಸಾಕ್ಷ್ಯಚಿತ್ರ ಚಿತ್ರೀಕರಣವೇ ಕಾರಣ: ವಿಪಕ್ಷ

ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಸಾಕ್ಷ್ಯಚಿತ್ರ ಚಿತ್ರೀಕರಣವೇ ರಾಜಮಂಡ್ರಿಯ ಗೋದಾವರಿ ಪುಷ್ಕರ ಘಾಟ್ ನಲ್ಲಿ ನಡೆದ ಕಾಲ್ತುಳಿತಕ್ಕೆ
ಪವಿತ್ರ ಸ್ನಾನಕ್ಕಾಗಿ ಉದ್ದದ ಸಾಲುಗಳಲ್ಲಿ ಕಾಯುತ್ತಿದ್ದ ಸಾಮಾನ್ಯ ಜನ
ಪವಿತ್ರ ಸ್ನಾನಕ್ಕಾಗಿ ಉದ್ದದ ಸಾಲುಗಳಲ್ಲಿ ಕಾಯುತ್ತಿದ್ದ ಸಾಮಾನ್ಯ ಜನ
Updated on: 

ಹೈದರಾಬಾದ್: ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಸಾಕ್ಷ್ಯಚಿತ್ರ ಚಿತ್ರೀಕರಣವೇ ರಾಜಮಂಡ್ರಿಯ ಗೋದಾವರಿ ಪುಷ್ಕರ ಘಾಟ್ ನಲ್ಲಿ ನಡೆದ ಕಾಲ್ತುಳಿತಕ್ಕೆ ಕಾರಣ ಎಂದು ವಿಪಕ್ಷಗಳಾದ ವೈ ಎಸ್ ಆರ್ ಸಿ ಮತ್ತು ಕಾಂಗ್ರೆಸ್ ದೂರಿವೆ.

ನಾಯ್ಡು ಅವರು ಆಧ್ಯಾತ್ಮಿಕ ಮನುಷ್ಯ ಎಂದು ತೋರಿಸಲು ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲಾಗುತ್ತಿತ್ತು. ಇದರಿಂದ ಅವರು ತೆರಳುವುದು ವಿಳಂಬವಾಗಿ ದೊಡ್ಡ ಸಾಲುಗಳಲ್ಲಿ ಜನ ೩ ಘಂಟೆಗಳಿಗೂ ಹೆಚ್ಚು ಸಮಯ ಕಾಯಬೇಕಾಗಿ ಬಂತು ಎಂದು ಎರಡೂ ಪಕ್ಷಗಳು ಆರೋಪಿಸಿವೆ. "ಪುಷ್ಕರ್ ಘಾಟ್ ನಲ್ಲಿ ನಾಯ್ಡು ಅವರು ಎರಡು ಘಂತೆಗಳಿಗೂ ಹೆಚ್ಚಿನ ಕಾಲ ಇದ್ದರು ಎಕೆಂದರ ಸಾಕ್ಷ್ಯಚಿತ್ರ ನಿರ್ದೇಶಕರು ಅವರ ಮತ್ತು ಅವರ ಕುಟುಂಬವರ್ಗವನ್ನು ಚಿತ್ರೀಕರಿಸಬೇಕಿತ್ತು. ಈ ದುರ್ಘಟನೆಗೆ ನಾಯ್ಡು ಅವರು ನೈತಿಕ ಹೊಣೆ ಹೊತ್ತು ಆಪಾದಿತನ ಸ್ಥಾನದಲ್ಲಿ ನಿಲ್ಲಬೇಕು" ಎಂದು ವೈ ಎಸ್ ಆರ್ ಸಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಆಗ್ರಹಿಸಿವೆ.

ಬುಧವಾರ ವರದಿಗಾರರನ್ನುದ್ದೇಶಿಸಿ ಮಾತನಾಡಿದ ವೈ ಎಸ್ ಆರ್ ಸಿ ವಕ್ತಾರ ವಾಸಿರೆಡ್ಡಿ ಪದ್ಮ ಈ ದುರಂತಕ್ಕೆ ಹೊಣೆ ಹೊರಬೇಕೆಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.

"ವಿಐಪಿಗಳಿಗೆ ಕಾಯ್ದಿರಿಸಲಾಗಿದ್ದ ಸರಸ್ವತಿ ಘಾಟ್ ಗೆ ತೆರಳುವ ಬದಲು ನಾಯ್ಡು ಅವರು ಸಾಮಾನ್ಯ ಜನ ಸ್ನಾನ ಮಾಡಲು ಕಾಯುತ್ತಿದ್ದ ಮುಖ್ಯ ದ್ವಾರದಿಂದ ಒಳಹೊಕ್ಕಿದ್ದಾರೆ ಅಲ್ಲದೆ ಎರಡು ಘಂತೆಗಳಿಗೂ ಹೆಚ್ಚಿನ ಸಮಯವನ್ನು ಅಲ್ಲಿ ವ್ಯಯಿಸಿ ಬಹಳ ದೂರದ ಪ್ರದೇಶಗಳಿಂದ ಬಂದಿದ್ದ ಭಕ್ತಾದಿಗಳನ್ನು ಹೆಚ್ಚು ಹೊತ್ತು ಕಾಯುವಂತೆ ಮಾಡಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ. "ಮುಖ್ಯಮಂತ್ರಿಗಳ ಈ ಕೃತ್ಯವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ತನಿಖೆಗಾಗಿ ಸಮಿತಿ ರಚಿಸಿದೆ" ಎಂದು ಕೂಡ ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com